ಯಶಸ್ವಿ ಕಲಾವೃಂದದಿಂದ ಉತ್ತಮ ಕಾರ್ಯ

yaksha
Published on

ಕೋಟ: ಯಕ್ಷಗಾನ ಅರ್ಥದಾರಿಗಳನ್ನು ರಂಗದಲ್ಲಿ ಬೆಳೆಸುವ ಪರಿಪಾಠ ಹಿಂದಿನಿಂದಲೂ ಇತ್ತು. ಆದರೆ ಇತ್ತೀಚೆಗೆ ತೀರಾ ವಿರಳವಾಗಿದೆ. ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ವಾರಕ್ಕೂ ಅಥವಾ ತಿಂಗಳಿಗೊಮ್ಮೆ ಆಯೋಜಿಸುವ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣ ಎಂದು ಅರ್ಥದಾರಿ ವಾಸುದೇವ ರಂಗ ಭಟ್ ಹೇಳಿದರು.

ಅರ್ಥಾಂಕುರ-10 ಕಾರ್ಯಕ್ರಮ ಪ್ರಯುಕ್ತ ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವಿ ಕಲಾವೃಂದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪಾದುಕಾ ಪ್ರದಾನ ತಾಳಮದ್ದಳೆ ಉದ್ಘಾಟಿಸಿ ಮಾತನಾಡಿದರು.

ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ, ಡಾ.ಜಗದೀಶ್ ಶೆಟ್ಟಿ ಸಿದ್ಧಾಪುರ, ಸತೀಶ್ ಶೆಟ್ಟಿ ಮೂಡುಬಗೆ, ಉದ್ಯಮಿ ಗೋಪಾಲ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net