

ಪಡುಬಿದ್ರಿ: ದೇಶ ಸೇವೆ ಮಾಡುವ ಅವಕಾಶ ಸಿಕ್ಕಾಗ ಅದನ್ನು ಬಿಡಬಾರದು. ಯೋಧರಾಗುವ ಯೋಗ ಎಲ್ಲರಿಗೂ ಸಿಗುವುದಿಲ್ಲ ಕೇವಲ ಇಂಜಿನಿಯರ್ ಡಾಕ್ಟರ್ ಆಗುವ ಕನಸು ಮಾತ್ರ ಕಾಣುವುದಕ್ಕೆ ಬದಲಾಗಿ ಯೋಧನಾಗುವ ಆಸೆ ಇರಬೇಕು ಎಂದು ಮಾಜಿ ಸೈನಿಕ ಅನಂತರಾಮ್ ರಾವ್ ಹೇಳಿದರು.
ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳಲ್ಲಿ ಶುಕ್ರವಾರ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಾಗೂ ಯೋಧ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ, ಪ್ರಾಂಶುಪಾಲ ಸಂಜೀವ ನಾಯಕ್, ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಮಂಜುನಾಥ ಎ.ವಿ. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಿಂಚನಾ ಸ್ವಾಗತಿಸಿ, ಚರಣ್ಯಾ ಕಾರ್ಯಕ್ರಮ ನಿರೂಪಿಸಿದರು. ಯಶಸ್ವಿ ವಂದಿಸಿದರು.
ನಾವು ಕೇವಲ ಸಿನಿಮಾ ಕಲಾವಿದರನ್ನು ಅಥವಾ ಕ್ರಿಕೆಟ್ ಪಟುಗಳನ್ನು ನಮ್ಮ ನೆಚ್ಚಿನ ನಾಯಕರನ್ನಾಗಿ ಆರಾಧಿಸುವುದರ ಬದಲಾಗಿ ನಮ್ಮ ಮನೆಯಲ್ಲಿ ದೇಶ ಕಾಯುವ ಯೋಧರ ಭಾವಚಿತ್ರ ಇಟ್ಟು ಆದರ್ಶವಾಗಿ ಇಟ್ಟುಕೊಳ್ಳಬೇಕು.-ಪ್ರೊ.ನಿತ್ಯಾನಂದ ಆಡಳಿತ ಮಂಡಳಿ ಪ್ರತಿನಿಧಿ