ಸದ್ಬೋಧನ ಸಮಿತಿ ಕಾರ್ಯ ಮಾದರಿ

26Gkka1
Published on

ಗೋಕಾಕ: ಶ್ರೀ ಸಿದ್ಧಾಂತ ಶಿಖಾಮಣಿ ಸದ್ಬೋಧನ ಅಭಿಯಾನ ಸಮಿತಿ ಹಮ್ಮಿಕೊಂಡಿದ್ದ ಮನೆಮನೆಗೆ ಸನಾತನ ಧರ್ಮ ಗ್ರಂಥ ಪಾರಾಯಣ, ವಚನ ಗಾಯನ ಹಾಗೂ ಪ್ರವಚನ ಮಾದರಿಯಾಗಿದೆ ಎಂದು ಧ್ಯಾನ ಮಂದಿರದ ಧರ್ಮಾಧಿ-ಕಾರಿ ಸುವರ್ಣತಾಯಿ ಹೊಸಮಠ ಹೇಳಿದರು.

ನಗರದ ಶ್ರೀ ಸಿದ್ಧಿ ವಿನಾಯಕ ಮಂದಿರದ ಕಲ್ಯಾಣ ಮಂಟಪದಲ್ಲಿ ಶ್ರಾವಣ ಮಾಸದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಪಾರಾಯಣ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರಕಾಶಸ್ವಾಮಿ ಕಂಬಿ ಮಾತನಾಡಿ, ಸಿದ್ಧಾಂತ ಶಿಖಾಮಣಿ ಪಾರಾಯಣದಿಂದ ಎಲ್ಲರ ಮನಸ್ಸು ನಿರ್ಮಲವಾಗಿ ಪರಮ ಪುರುಷಾರ್ಥ ಮೋ ಸಾಧನೆಗೆ ಪೂರಕವಾಗಲಿದೆ. ಜತೆಗೆ ಸಮಾಜದಲ್ಲಿ ಸಾಮರಸ್ಯ, ಸದ್ಭಾವನೆ ವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಶ್ರೀ ರುದ್ರ ಮಾತಾ ಬಳಗದ ಮುಖ್ಯಸ್ಥೆ ಜಯಶ್ರೀ ಗುಬ್ಬಣ್ಣೂರ, ಪದ್ಮಾ ಕೌಜಲಗಿ, ಶಿಲ್ಪಾ ಮುಚ್ಚಂಡಿಹಿರೇಮಠ, ಶೈಲಜಾ ಮಠದ, ವಿದ್ಯಾ ಪಾಟೀಲ ಇತರರಿದ್ದರು. ಅಂಬಿಕಾ ಪಟ್ಟಣಶೆಟ್ಟಿ ನಿರೂಪಿಸಿದರು. ಗಿರಿಜಾ ದೊಡ್ಡಮನಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net