ಎರಡನೇ ದಿನವೂ ಹೇರ್ ಕಲರಿಂಗ್‌ಗೆ ಉತ್ತಮ ಸ್ಪಂದನೆ

20 CRP-1A (2)
Published on

ಚನ್ನರಾಯಪಟ್ಟಣ: ನಂ.1 ಕನ್ನಡ ದಿನ ಪತ್ರಿಕೆ ‘ವಿಜಯವಾಣಿ’ ಸಹಭಾಗಿತ್ವದಲ್ಲಿ ಪಟ್ಟಣದ ಪದ್ಮಶ್ರೀ ಕಾಂಪ್ಲೆಕ್ಸ್‌ನಲ್ಲಿ ಆಯೋಜಿಸಿರುವ ಉಚಿತ ಗಾರ್ನಿಯರ್ ಹೇರ್ ಕಲರಿಂಗ್‌ಗೆ ಎರಡನೇ ದಿನವಾದ ಶನಿವಾರವೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.


ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೂ ಸುಮಾರು 105 ಜನರು ಆಗಮಿಸಿ ಕೂದಲಿಗೆ ಕಲರಿಂಗ್ ಮಾಡಿಸಿಕೊಂಡರು. ಇದರಲ್ಲಿ 80 ಮಹಿಳೆಯರು, 25 ಪುರುಷರು ಇದ್ದರು. ತಮಗಿಷ್ಟವಾದ ಬಣ್ಣವನ್ನು ಹಾಕಿಸಿಕೊಂಡಿದ್ದು ವಿಶೇಷವಾಗಿತ್ತು. ಭಾನುವಾರವೂ ಸಹ ಪಟ್ಟಣದ ಪದ್ಮಶ್ರೀ ಕಾಂಪ್ಲೆಕ್ಸ್‌ನಲ್ಲಿ ಉಚಿತ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ಮುಂದುವರಿಯಲಿದೆ.


ವಿಜಯವಾಣಿ ದಿನಪತ್ರಿಕೆ ಮಹಿಳೆಯರಿಗಾಗಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವುದು ವಿಶೇಷವಾಗಿದೆ. ಇಂದಿನ ಹೇರ್ ಕಲರಿಂಗ್ ಅಭಿಯಾನದಲ್ಲಿ ಹೆಚ್ಚು ಮಹಿಳೆಯರೇ ಪಾಲ್ಗೊಂಡಿದ್ದು ಗಮನಾರ್ಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net