

ಚನ್ನರಾಯಪಟ್ಟಣ: ನಂ.1 ಕನ್ನಡ ದಿನಪತ್ರಿಕೆ ’ವಿಜಯವಾಣಿ’ ಹಾಗೂ ಗಾರ್ನಿಯರ್ ಸಹಭಾಗಿತ್ವದಲ್ಲಿ ಪಟ್ಟಣದ ಪದ್ಮಶ್ರೀ ಕಾಂಪ್ಲೆಕ್ಸ್‌ನಲ್ಲಿ ಆಯೋಜಿಸಿರುವ ಉಚಿತ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನಕ್ಕೆ ಮೊದಲನೇ ದಿನವಾದ ಶುಕ್ರವಾರ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಯಿತು.
‘ವಿಜಯವಾಣಿ’ ದಿನಪತ್ರಿಕೆ ಸುದ್ದಿಗೆ ಮಾತ್ರ ಮೀಸಲಾಗಿಲ್ಲ. ಮಹಿಳೆಯರಿಗಾಗಿ ನಾರಿ ನಿನಗೊಂದು ಸಾರಿ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಸದಾ ಆಯೋಜಿಸುತ್ತಾ ಓದುಗರೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಇದೀಗ ಉಚಿತ ಗಾರ್ನಿಯರ್ ಕಲರಿಂಗ್ ಕಾರ್ಯಕ್ರಮ ಆಯೋಜಿಸಿರುವುದು ಸಮಾಜಮುಖಿ ಕಾರ್ಯಕ್ರಮಕ್ಕೆ ಒಂದು ಉತ್ತಮ ನಿದರ್ಶನವಾಗಿದೆ.
ಯಶೋದಾ ಜೈನ್, ಕಿತ್ತೂರ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ, ಚನ್ನರಾಯಪಟ್ಟಣ