

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ)ಶನಿವಾರ ಕೋನದಾಸಪುರ ವಸತಿ ಸಮುಚ್ಛಯದಲ್ಲಿ ಆಯೋಜಿಸಿರುವ "ಫ್ಲಾಟ್' ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.
ನಾಗರಬಾವಿಯ ಚಂದ್ರಾ ಬಡಾವಣೆಯಲ್ಲಿ 3 ಬಿಹೆಚ್ಕೆ ಫ್ಲಾಟ್ಗಳಲ್ಲಿ ಕೆಲ ಫ್ಲಾಟ್ ಹಂಚಿಕೆಗೆ ಲಭ್ಯವಿದ್ದು, ಉಳಿದ ಫ್ಲಾಟ್ಗಳು ಮಾರಾಟವಾಗಿವೆ. ಕಣಿಮಿಣಿಕೆಯಲ್ಲಿ 2 ಬಿಹೆಚ್ಕೆ ಫ್ಲಾಟ್ಗಳು ಮತ್ತು ಕೋನದಾಸಪುರ ಹಂತ-2ರಲ್ಲಿ ಹಂಚಿಕೆಗೆ ಲಭ್ಯವಿತ್ತು.ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗಿದೆ.
ಬೆಳಿಗ್ಗೆ 9 ಗಂಟೆಯಿಂದ ಶುರುವಾದ ಮೇಳ ಸಂಜೆ 5ಗಂಟೆವರೆಗೆ ನಡೆಯಿತು. ಮಧ್ಯಾಹ್ನ ವೇಳೆ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. ಒಟ್ಟು 150 ಫ್ಲಾಟ್ಗಳು ಮಾರಾಟವಾಗಿ 75 ಫ್ಲಾಟ್ ಹಂಚಿಕೆದಾರರು ಹಂಚಿಕೆ ಪತ್ರವನ್ನು ಸ್ವೀಕರಿಸಿದ್ದಾರೆ. ಬಾಕಿ 75 ಫ್ಲಾಟ್ಗಳ ಖರೀದಿದಾರರು ತಾಂತ್ರಿಕ ಕಾರಣಗಳಿಂದ ಆನ್ಲೈನ್ ಮೂಲಕ ಫ್ಲಾಟ್ ಮೊತ್ತವನ್ನು ಪಾವತಿಲಾಗದೇ ಚೆಕ್ನ್ನು ನೀಡಿರುತ್ತಾರೆ. ಕಚೇರಿ ಸಮಯದಲ್ಲಿ ಆನ್ಲೈನ್ನಲ್ಲಿ ಪಾವತಿಸಿದ ನಂತರ ಚೆಕ್ ಹಿಂತಿರುಗಿಸಿ ಹಂಚಿಕೆ ಪತ್ರ ನೀಡಲಾಗುತ್ತದೆ. ಮೇಳದಲ್ಲಿ 8 ಬ್ಯಾಂಕ್ಗಳು ಭಾಗವಹಿಸಿವೆ.ಪ್ರತಿ ಬ್ಯಾಂಕ್ಗೆ ಸಾಲಕ್ಕೆ ಕೋರಿ 10-15 ಅರ್ಜಿಗಳು ಸ್ವೀಕೃತಗೊಂಡಿವೆ. ಫೆಬ್ರವರಿ ತಿಂಗಳ ಫ್ಲಾಟ್ ಮೇಳದಲ್ಲಿ ಮಾರಾಟವಾದ 50 ಫ್ಲಾಟ್ಗಳಿಗೆ ಈಗಾಗಲೇ ಶುದ್ಧ ಕ್ರಯ ಪತ್ರವನ್ನು ನೋಂದಾಯಿಸಲಾಗಿದೆ.