ಉತ್ತಮ ಜೀವನಕ್ಕೆ ಆರೋಗ್ಯ ಅವಶ್ಯ

hadi hariyada apta samalochaki
ಅಳವಂಡಿ ಶ್ರೀಮುದಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಹದಿ ಹರೆಯದವರ ಆರೋಗ್ಯ ಹಾಗೂ ಎಚ್‌ಐವಿ ಬಗ್ಗೆ ನಡೆದ ಆರೋಗ್ಯ ಅರಿವು ಕಾರ್ಯಕ್ರಮವನ್ನು ಉದ್ದೇಶಿಸಿ ಐಸಿಟಿಸಿ ಸಮಾಲೋಚಕಿ ಶೀಲಾ ಮಾತನಾಡಿದರು. ಮುಖ್ಯ ಶಿಕ್ಷಕ ಸುರೇಂದ್ರಗೌಡ, ಆಪ್ತ ಸಮಾಲೋಚಕಿ ಕಲ್ಪನಾ, ಶಿಕ್ಷಕಿ ಗವಿಸಿದ್ದಮ್ಮ ಹಾಗೂ ವಿದ್ಯಾರ್ಥಿನಿಯರು ಇದ್ದರು.
Published on

ಅಳವಂಡಿ: ಉತ್ತಮ ಜ್ಞಾನ ಪಡೆದು ಜೀವನದಲ್ಲಿ ಏನನ್ನಾದರು ಸಾಧನೆ ಮಾಡಬೇಕೆಂದರೆ ಸದೃಡ ಆರೋಗ್ಯ ಬಹು ಮುಖ್ಯ. ಕಾರಣ ಜೀವನದಲ್ಲಿ ಉತ್ತಮ ಆರೋಗ್ಯ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕ ಸುರೇಂದ್ರಗೌಡ ತಿಳಿಸಿದರು.

ಗ್ರಾಮದ ಶ್ರೀಮುದಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಹಿರೇಸಿಂದೋಗಿಯಿಂದ ನಡೆದ ಹದಿ ಹರೆಯದವರ ಆರೋಗ್ಯ ಕಾರ್ಯಕ್ರಮ ಹಾಗೂ ಎಚ್‌ಐವಿ ಬಗ್ಗೆ ನಡೆದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಐಸಿಟಿಸಿ ಸಮಾಲೋಚಕಿ ಶೀಲಾ ಮಾತನಾಡಿ, ಬಾಲ್ಯಾವಸ್ಥೆಯಿಂದ ತಾರುಣ್ಯದ ಬದುಕಿಗೆ ಕಾಲಿಡುವದೇ ಯೌವ್ವನ. ಈ ಹಂತದಲ್ಲಿ ದೈಹಿಕ ಬೆಳವಣಿಗೆ ಜೊತೆಗೆ ಮಾನಸಿಕ ಬೆಳವಣಿಗೆ ಕೂಡ ಆಗುತ್ತದೆ.

ಈ ಸಮಯದಲ್ಲಿ ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸ್ವಚ್ಚತೆ ಕಾಪಾಡಿ. ಮಾನಸಿಕ, ದೈಹಿಕ ಸಮಸ್ಯೆಗಳ ಬಗ್ಗೆ ಆಪ್ತ ಸಮಾಲೋಚಕರ ತಿಳಿಸಿ ಪರಿಹರ ಕಂಡುಕೊಳ್ಳಿ. ಎಚ್‌ಐವಿ, ಡೆಂಗ್ಯೂ, ಮಲೇರಿಯಾ ಮುಂತಾದ ರೋಗಗಳ ಬಗ್ಗೆ ಜಾಗೃತಿಯಿಂದ ಇರಬೇಕು ಎಂದರು.

ಹದಿಹರೆಯದವರ ಆಪ್ತ ಸಮಾಲೋಚಕಿ ಕಲ್ಪನಾ, ಶಿಕ್ಷಕಿ ಗವಿಸಿದ್ದಮ್ಮ ಹಾಗೂ ವಿದ್ಯಾರ್ಥಿನಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net