More

    VIDEO | ಆಯುಷ್ಮಾನ್ ಭವ ಉದ್ಘಾಟನೆ; ಮಹತ್ವದ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 73ನೇ ಹುಟ್ಟುಹಬ್ಬದ ವಿಶೇಷ ದಿನದಂದು ಭಾರತ ಸರ್ಕಾರವು ‘ಆಯುಷ್ಮಾನ್ ಭವ’ ಎಂಬ ಹೊಸ ಆರೋಗ್ಯ ಅಭಿಯಾನವನ್ನು ಪರಿಚಯಿಸುತ್ತಿದ್ದು, ಈ ಅಭಿಯಾನದ ಕುರಿತು ಕೇಂದ್ರ ಸರ್ಕಾರ ಇದೀಗ ಹಲವು ಮಾಹಿತಿಗಳನ್ನು ಪ್ರಕಟಿಸಿದೆ.

    ಇದನ್ನೂ ಓದಿ: ಬಸ್​​ ಮೇಲೆ ಏಕಾಏಕಿ ದಾಳಿ ನಡೆಸಿದ ಆನೆ, ಪ್ರಯಾಣಿಕರು ಕಂಗಾಲು..!

    ಇಂದು ಆಯುಷ್ಮಾನ್​ ಭವ ಯೋಜನೆಯನ್ನು ಉದ್ಘಾಟನೆಗೊಳಿಸಿ, ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ,“ಅಂಗಾಂಗ ದಾನವು ಒಂದು ಮಹತ್ವದ ದತ್ತಿ ಕಾರ್ಯವಾಗಿದೆ. ‘ಸೇವಾ ಪಖವಾಡ’ದ ಸಮಯದಲ್ಲಿ ಅಂಗಾಂಗ ದಾನಕ್ಕಾಗಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬೇಕೆಂದು ನಾನು ಜನಸಾಮಾನ್ಯರಲ್ಲಿ ಮನವಿ ಮಾಡುತ್ತೇನೆ” ಎಂದು ಹೇಳಿದರು.

    https://x.com/PTI_News/status/1701861929818472478?s=20

    “ಹೆಚ್ಚುವರಿಯಾಗಿ, ನಾವು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ‘ಸ್ವಚ್ಛತಾ ಅಭಿಯಾನ’ ನಡೆಸಲು ಬಯಸುತ್ತೇವೆ. ಈ ಹೊಸ ಅಭಿಯಾನದಲ್ಲಿ ನಮ್ಮನ್ನು ಬೆಂಬಲಿಸುವಂತೆ ನಾನು ಪ್ರತಿಯೊಬ್ಬರಲ್ಲೂ ವಿನಮ್ರವಾಗಿ ವಿನಂತಿಸುತ್ತೇನೆ” ಎಂದು ಹೇಳಿದರು.

    ಇದನ್ನೂ ಓದಿ: ಸನಾತನ ಧರ್ಮದ ಕುರಿತು ಯತ್ನಾಳ್ ಹೇಳಿಕೆಗೆ ಹಿಂದೂ ಮುಖಂಡ ಮೋಹನ್ ಗೌಡ ರಿಯಾಕ್ಷನ್

    ‘ಆಯುಷ್ಮಾನ್ ಭವ’ ಅಭಿಯಾನಕ್ಕೆ ಸೆಪ್ಟೆಂಬರ್ 13 ರಂದು ಚಾಲನೆ ನೀಡಿದ್ದರೂ, ಇದನ್ನು ಸೆಪ್ಟೆಂಬರ್ 17 ರಂದು ಪ್ರಧಾನಿಗಳ ಜನ್ಮದಿನದಂದು ಪ್ರಾರಂಭವಾಗುವ ‘ಸೇವಾ ಪಖ್ವಾಡಾ’ ಸಮಯದಲ್ಲಿ ಅಧಿಕೃತವಾಗಿ ಪರಿಚಯಿಸಲಾಗುವುದು,(ಏಜೆನ್ಸೀಸ್).

    ಮೃತ ಮಗನ ಮೂರ್ತಿ ಇಟ್ಟು ಮನೆಯಲ್ಲಿ ದೇವಸ್ಥಾನ ಕಟ್ಟಿದ ಪೋಷಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts