ಚೀರುಂಭ ಭಗವತೀ ಕ್ಷೇತ್ರದಲ್ಲಿ ಗೊನೆ ಮುಹೂರ್ತ

Ull_Bhagavathi
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಮಾರ್ಚ್ 29ರಿಂದ ಏಪ್ರಿಲ್ 5ರತನಕ ನಡೆಯಲಿರುವ ಭರಣಿ ಮಹೋತ್ಸವ ಪ್ರಯುಕ್ತ ಗೊನೆ, ಮರ, ಮಗು ಮುಹೂರ್ತ ವಿಜೃಂಭಣೆಯಿಂದ ನಡೆಸಲಾಗಿದೆ ಎಂದು ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ ಹೇಳಿದರು.

ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಭರಣಿ ಮಹೋತ್ಸವ ಪ್ರಯುಕ್ತ ಪೂರ್ವಭಾವಿಯಾಗಿ ಭಾನುವಾರ ನಡೆದ ಗೊನೆ ಮರ, ಪರಪ್ಪು ತರವಾಡು ಮನೆಯಲ್ಲಿ ನಡೆದ ಮಗು ಮುಹೂರ್ತ ಕಾರ್ಯಕ್ರಮದ ಬಳಿಕ ಮಾತನಾಡಿದರು.

ಮಾ.29ರಂದು ತೊಕ್ಕೊಟ್ಟು ಓವರ್‌ಬ್ರಿಡ್ಜ್ ಜೈ ವೀರಮಾರುತಿ ವ್ಯಾಯಾಮ ಶಾಲೆಯಿಂದ ಚೀರುಂಭ ಭಗವತೀ ಕ್ಷೇತ್ರಕ್ಕೆ ಹೊರೆಕಾಣಿಕೆ ಶೋಭಾಯಾತ್ರೆ ಬರಲಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು.

ಕ್ಷೇತ್ರದ ಅಧ್ಯಕ್ಷ ಚಿದಾನಂದ ಗುರಿಕಾರ ನಂದ್ಯ ಮಾತನಾಡಿ, ಮಾ.29ರಂದು ಹೊರೆಕಾಣಿಕೆ ಶೋಭಾಯಾತ್ರೆ, ಮಾ.30ರಂದು ಕ್ಷೇತ್ರದಲ್ಲಿ ವಾಡಿಕೆಯಂತೆ ನಡಾವಳಿ ಉತ್ಸವ ನಡೆಯಲಿದೆ. ಮಾ.31ರಂದು ಸಂಜೆ 7ಕ್ಕೆ ಸೋಮೇಶ್ವರ ಸೋಮನಾಥ ದೇವರ ಭೇಟಿ, 11 ಗಂಟೆಗೆ ಭರಣಿ ಮಹೋತ್ಸವದ ಧ್ವಜಾರೋಹಣ, ಬಳಿಕ 5 ದಿನ ಧಾರ್ಮಿಕ, ಭರಣಿ ಕಲ್ಯಾಣೋತ್ಸವ ಜರುಗಲಿದೆ ಎಂದರು.

ಕ್ಷೇತ್ರದ ಆಚಾರ ಪಟ್ಟವರು, ಗುರಿಕಾರರು, ಪ್ರಧಾನ ಕಾರ್ಯದರ್ಶಿ ಯಶವಂತ ಉಚ್ಚಿಲ್, ಕೋಶಾಧಿಕಾರಿ ಜಗದೀಶ್ ಉಳ್ಳಾಲ್, ಹೊರೆಕಾಣಿಕೆ ಸಮಿತಿ ಸಂಚಾಲಕ ಉಮೇಶ್ ಬೆಂಜನಪದವು, ಸಾಹಿತಿ ಡಾ.ಅರುಣ್ ಉಳ್ಳಾಲ್, ಮೊಕ್ತೇಸರರಾದ ವಿಶ್ವನಾಥ ಉಚ್ಚಿಲ್, ರಾಘವ ಕೈಕಂಬ, ಉಮೇಶ್ ಕೊಣಾಜೆ, ಸದಾಶಿವ ಉಳ್ಳಾಲ್, ಉಪಾಧ್ಯಕ್ಷರಾದ ದಿನೇಶ್ ಕುಂಪಲ, ದಾಮೋದರ ತಚ್ಚಾಣಿ, ನಾಗಪ್ಪ ಅಡ್ಯಾರ್, ಜನಾರ್ದನ ಕಾಯರ್‌ಪಳಿಕೆ, ಕಾರ್ಯದರ್ಶಿಗಳಾದ ಕಾಂಚನ್ ಕುಮಾರ್, ಸುರೇಶ್ ಬೀರಿ, ಹರಿಶ್ಚಂದ್ರ ಕುತ್ತಾರ್, ಗೌರವ ಸಲಹೆಗಾರರಾದ ನಾಗೇಶ್ ತೊಕ್ಕೊಟ್ಟು, ಪ್ರಕಾಶ್ ಕೆ.ಪಿ.ನಾರ್ಲ, ತಾರಾನಾಥ್ ಕೊಡ್ಮನ್, ವೆಂಕಪ್ಪ ಮೋರ್ಲ, ಯುವ ವೇದಿಕೆ ಪ್ರಧಾನ ಸಂಚಾಲಕ ಕೇಶವ ತೊಕ್ಕೊಟ್ಟು, ಮಹಿಳಾ ವೇದಿಕೆ ಪ್ರಧಾನ ಸಂಚಾಲಕಿ ಮಾಧವಿ ಉಳ್ಳಾಲ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net