ಶ್ರದ್ಧಾಕೇಂದ್ರದಿಂದ ಧರ್ಮ, ಸಂಸ್ಕೃತಿ ಉಳಿವು : ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಆಶೀರ್ವಚನ

New Project (17)
Published on

ಕಿನ್ನಿಗೋಳಿ: ಗ್ರಾಮೀಣ ಪ್ರದೇಶ ಧಾರ್ಮಿಕ ಕೇಂದ್ರಗಳು, ಧರ್ಮ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದೆ. ಪ್ರತಿಯೊಂದು ಮನೆಯಲ್ಲಿ ಭಜನೆ, ದೇವರ ಸ್ತುತಿ ನಿರಂತರ ನಡೆಯಬೇಕು ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಹರಿಹರ ಶ್ರೀರಾಮ ಭಜನಾ ಮಂದಿರ ಗೋಳಿಜೋರ ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಭಜನಾ ಮಂದಿರಕ್ಕೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಶುಭ ಹಾರೈಸಿದರು. ಸ್ಕಂದ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.

ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ವೇದವ್ಯಾಸ ಉಡುಪ ದೇವಸ್ಯಮಠ ಕೊಡೆತ್ತೂರು, ಹರಿಕೃಷ್ಣ ಪುನರೂರು, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ನಿತಿನ್ ಶೆಟ್ಟಿ ದೇವಸ್ಯ ಕೊಡೆತ್ತೂರುಗುತ್ತು, ಜಯರಾಮ ಮುಕಾಲ್ದಿ ಕೊಡೆತ್ತೂರು, ಚರಣ್ ಶೆಟ್ಟಿ, ಶೈನ್ ಶೆಟ್ಟಿ ಮುಂಬೈ, ರಘುರಾಜ್ ಕದ್ರಿ, ಶಯನ್ ಶೆಟ್ಟಿಗಾರ್, ರಾಮ ಗುರಿಕಾರ, ಡಾ.ಸರಳ ರಮೇಶ್ ಕುಂದರ್ ಉಪಸ್ಥಿತರಿದ್ದರು.

ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಸ್ವಾಗತಿಸಿದರು. ಶಂಕರ್ ಮಾಸ್ಟರ್ ಪ್ರಸ್ತಾವನೆಗೈದರು. ದಿವಾಕರ ಕರ್ಕೇರ ನಿರೂಪಿಸಿದರು. ಪ್ರಕಾಶ್ ಆಚಾರ್ಯ ಸನ್ಮಾನಿತರ ಪಟ್ಟಿ ವಾಚಿಸಿದರು. ಧನಂಜಯ ಶೆಟ್ಟಿಗಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net