

ಕಿನ್ನಿಗೋಳಿ: ಧಾರ್ಮಿಕ ಕೇಂದ್ರಗಳು ನಿರಂತರ ಬೆಳೆಯುತ್ತಿರಬೇಕು. ಅದರೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು.
ಕಿನ್ನಿಗೋಳಿ ಸಮೀಪದ ಹರಿಹರ ಶ್ರೀ ರಾಮ ಭಜನಾ ಮಂದಿರ ರಾಮನಗರ ಗೋಳಿಜೋರ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಅಂಗವಾಗಿ ಶ್ರೀಕ್ಷೇತ್ರದ ಗೋಪುರದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರಕ್ಕೆ ಮುಖ್ಯದ್ವಾರ, ಆವರಣ ಗೋಡೆ, ಇಂಟರ್‌ಲಾಕ್ ಮತ್ತಿತರ ಕಾಮಗಾರಿಗಳು 30 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿದೆ ಎಂದರು.
ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಧನಂಜಯ ಶೆಟ್ಟಿಗಾರ್ ಸಾಗರಿಕಾ, ಮುಖ್ಯಪ್ರಾಣ ಕಿನ್ನಿಗೋಳಿ, ಗಂಗಾಧರ ಶೆಟ್ಟಿಗಾರ್, ಶಂಕರ ಮಾಸ್ಟರ್, ಪ್ರಕಾಶ್ ಹೆಗ್ಡೆ ಎಳತ್ತೂರು, ಶರತ್ ಶೆಟ್ಟಿ ಗೋಳಿಜೋರ, ಶಶೀಂದ್ರ ಶೆಟ್ಟಿ ಅಡ್ರಗುತ್ತು, ಗೋಪಾಲ ಕೃಷ್ಣ ಕಾಡುಮನೆ, ರಘು ಗೋಳಿಜೋರ, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ, ಪ್ರಕಾಶ್ ಸಾಲಿಯಾನ್ ಉಪಸ್ಥಿತರಿದ್ದರು.