

ಕಿನ್ನಿಗೋಳಿ: ಗ್ರಾಮೋತ್ಸವ ಕೆರೆಕಾಡು 9ನೇ ವರ್ಷದ ಗೂಡುದೀಪ ಸ್ಪರ್ಧೆ ಅ.27ರಂದು ಸಂಜೆ 4ರಿಂದ ಕೆರೆಕಾಡಿನ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ ಸಭಾಭವನದಲ್ಲಿ ಜರುಗಲಿದೆ.
ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ, ಗ್ರಾಮ ವಿಕಾಸ ಸಮಿತಿ ಕೆರೆಕಾಡು, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಸುರತ್ಕಲ್ ವಲಯ, ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ, ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್ ಕೆರೆಕಾಡು, ಲೋಕ ಮುಖಿ ಟ್ರಸ್ಟ್ ಎಸ್‌ಕೋಡಿ, ತುಡರ್ ಫ್ರೆಂಡ್ಸ್ ಕೆರೆಕಾಡು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೆರೆಕಾಡು, ಕಟ್ಟೆ ಪೂಜೋತ್ಸವ ಸಮಿತಿ ಕೆರೆಕಾಡು, ಯೂತ್ ಫ್ರೆಂಡ್ಸ್ ಕೆರೆಕಾಡು, ಮೋಕೆದ ಕಲಾವಿದರು ಕೆರೆಕಾಡು, ಅಕ್ಷಯ ಮಹಿಳಾ ಮಂಡಳಿ ಕೆರೆಕಾಡು, ಶ್ರೀ ದುರ್ಗಾ ಶಕ್ತಿ ಮಹಿಳಾ ಮಂಡಳಿ ಕೆರೆಕಾಡು, ವಿಪ್ರ ಸಂಪದ ಪುನರೂರು, ಶ್ರೀ ದುರ್ಗಾಪರಮೇಶ್ವರೀ ಚೆಂಡೆ ಬಳಗ ಕೆರೆಕಾಡು, ಸೆವೆನ್ ಸ್ಟಾರ್ ಕೆರೆಕಾಡು, ಕೋಟೆಬಬ್ಬು ಸ್ವಾಮಿ ದೈವಸ್ಥಾನ ಕೆರೆಕಾಡು, ಹಿಂದೂ ಜಾಗರಣಾ ವೇದಿಕೆ ಕೆರೆಕಾಡು, ಓಂ ಫ್ರೆಂಡ್ಸ್ ಕೆರೆಕಾಡು, ಶ್ರೀ ರಾಮ ಸೇನೆ ಕೆರೆಕಾಡು, ಸಾರ್ವಜನಿಕ ಹಿಂದು ರುದ್ರಭೂಮಿ ಟ್ರಸ್ಟ್ ಕೆರೆಕಾಡು ಇದರ ಸಹಯೋಗದಲ್ಲಿ ಸ್ಪರ್ಧೆ ನಡೆಯಲಿದೆ.
ಸಾಂಪ್ರದಾಯಿಕ ಮತ್ತು ಆಧುನಿಕ ಸೇರಿದಂತೆ 2 ವಿಭಾಗದಲ್ಲಿ (ಕೆರೆಕಾಡು ಗ್ರಾಮಸ್ಥರಿಗೆ ಮಾತ್ರ) ಸ್ಪರ್ಧೆ ನಡೆಯಲಿದೆ. ಪ್ರಥಮ ರೂ. 1500, ದ್ವಿತೀಯ ರೂ. 1000 ಹಾಗೂ ತೃತೀಯ 500 ನಗದು ಮತ್ತು ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಪ್ರೋತ್ಸಾಹಕರ ಬಹುಮಾನವಿರುವುದು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಮಧ್ಯಾಹ್ನ 2ಗಂಟೆ ಒಳಗೆ ಬರಬೇಕು. ಕಳೆದ ಬಾರಿ ಬಹುಮಾನ ಗಳಿಸಿದ ಗೂಡುದೀಪ, ಪ್ಲಾಸ್ಟಿಕ್, ಥರ್ಮಾಕೋಲ್ ಅಳವಡಿಸಿದ ಮತ್ತು ಹೊರಗಿನಿಂದ ಮಾಡಿಸಿ ತಂದ ಗೂಡುದೀಪವನ್ನು ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.