ಕಲಬುರಗಿ: ಮನೆಯ ಕಿಡಕಿಯಲ್ಲಿ ಕೀ ಇಟ್ಟು ಹೋಗಿದ್ದ ವೇಳೆ ಮಧ್ಯಾಹ್ನ ೩ಗಂಟೆ ಸುಮಾರಿಗೆ ಬಾಗಿಲು ತೆರೆದು ಮನೆಯಲ್ಲಿದ್ದ ೧.೪೬ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ನೇತಾಜಿ ನಗರದಲ್ಲಿ ನಡೆದಿದೆ. ಮಹಾಂತೇಶ ಇಬ್ರಾಂಹಿಪುರ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮಹಾಂತೇಶ ಪತ್ನಿ ವಾಣಿ ಮಧ್ಯಾಹ್ನ ೧ಗಂಟೆಗೆ ಮನೆಯಿಂದ ಹೊರ ಹೋಗಿದ್ದು, ಮೂರಕ್ಕೆ ವಾಪಸ್ ಬಂದು ನೋಡಿದ್ದಾಗ ಕಳ್ಳತನವಾಗಿರುವುದು ತಿಳಿದಿದೆ. ಬೆಡ್‌ರೂಮಿನಲ್ಲಿನ ಅಲಮಾರಿಯಲ್ಲಿದ್ದ ೪೦ ಗ್ರಾಂ ಮಂಗಳ ಸೂತ್ರ, ೧೨ ತೊಲೆ ಬೆಳ್ಳಿ ಕಾಲ್ಚೇನು, ಮೂರು ತೊಲೆಯ ಬೆಳ್ಳಿ ಚೈನು ಸೇರಿ ಒಟ್ಟು ೧.೪೬ ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.