

ಉಪ್ಪಿನಂಗಡಿ: ಬೆಂಗಳೂರು ವಿವಿ ಘಟಿಕೋತ್ಸವ ಸಮಾರಂಭದಲ್ಲಿ ಉಪ್ಪಿನಂಗಡಿಯ ಶಾಹಿಲ್ ಯಾಕೂಬ್ ಬಿ.ಎ ಪದವಿಯ ರಾಜಕೀಯ ವಿಜ್ಞಾನದಲ್ಲಿ ಚಿನ್ನದ ಪದಕ ಮತ್ತು ನಗದು ಬಹುಮಾನ ಪಡೆದಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪದಕ ಪ್ರದಾನ ಮಾಡಿದರು. ಪ್ರೊ.ದೀಪಕ್ ಕುಮಾರ್ ಶ್ರೀವಾಸ್ತವ, ವಿವಿ ಕುಲಪತಿ ಡಾ. ಜಯಕಾರ ಎಸ್.ಎಂ. ಉಪಸ್ಥಿತರಿದ್ದರು.
ಸಾಹಿಲ್ ಪ್ರಸ್ತುತ ನವದೆಹಲಿಯ ಜೆಎನ್‌ಯುನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದಾರೆ. ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್, ಇಂದ್ರಪ್ರಸ್ಥ ವಿದ್ಯಾಲಯ, ಸಂತ ಆಲೋಶಿಯಸ್ ಪಿಯು ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದು, ಉಪ್ಪಿನಂಗಡಿಯ ಸಾಹಿತಿ ಜಲೀಲ್ ಮುಕ್ರಿ ಮತ್ತು ಉಪ್ಪಿನಂಗಡಿ ಇಂಡಿಯನ್ ಸ್ಕೂಲ್‌ನ ಪ್ರಾಂಶುಪಾಲೆ ಸಂಶಾದ್ ದಂಪತಿಯ ಪುತ್ರ.