

ಬೆಂಗಳೂರು: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಹಕಾರದೊಂದಿಗೆ ಇಂಡಿಯಾ ಸ್ಕೇಟ್ ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 3 ದಿನಗಳ ರಾಜ್ಯ ಮಟ್ಟದ 3ನೇ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯ 17 ವರ್ಷ ವಯೋಮಿತಿ ವಿಭಾಗದಲ್ಲಿ ಎನ್.ಏಕಾಂಶ್ ಕುಮಾರ್ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ.
ಎನ್.ಏಕಾಂಶ್ ಹೊಸಕೆರೆಹಳ್ಳಿ ನಿವಾಸಿ ನವೀನ್ ಕುಮಾರ್ ಮತ್ತು ಟಿ.ಆರ್.ಸೌಮ್ಯ ಪುತ್ರ. ಜಯನಗರದ ದಿ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
ಚನ್ನಮ್ಮನ ಕೆರೆಯಲ್ಲಿರುವ ಇಂದುಧರ್ ಮತ್ತು ಆಶಾ ನಡೆಸುತ್ತಿರುವ ಫೋರ್ಸ್-1 ಸ್ಕೇಟಿಂಗ್ ಕ್ಲಬ್ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ಪ್ರತಿಕ್ ರಾಜ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ಎನ್.ಏಕಾಂಶ ಸಾಧನೆಗೆ ಪಾಲಕರು, ಶಿಕ್ಷಕರು, ಮಾರ್ಗದರ್ಶಕರು ಸಂತಸ ವ್ಯಕ್ತಪಡಿಸಿದ್ದಾರೆ.