

ಪುತ್ತೂರು ಗ್ರಾಮಾಂತರ: ವಿದ್ಯಾಭಾರತಿಯ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಟ್ಟಂಪಾಡಿ ಗ್ರಾಮದ ದೃಶನ ಸುರೇಶ್ ಸರಳಿಕಾನ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ದಕ್ಷಿಣ ವಲಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ಸಿಬಿಎಸ್‌ಸಿಯ 8ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಮಾರ್ಷಲ್ ಆರ್ಟ್ಸ್ ಪುತ್ತೂರು ಶಾಖೆಯ ಮುಖ್ಯಶಿಕ್ಷಕ ನಿತಿನ್ ಎನ್.ಸುವರ್ಣ ಮಾರ್ಗದರ್ಶನದಲ್ಲಿ, ಶಿಕ್ಷಕ ಶಿವಪ್ರಸಾದ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ ಮತ್ತು ಸುರೇಶ್ ದಂಪತಿ ಪುತ್ರಿ.