

ಹಾವೇರಿ: ಮನೆಯ ಹಿಂಬಾಗಿಲ ಚೀಲಕ ಮುರಿದು ಒಳಗೆ ನುಗ್ಗಿದ ಖದೀಮರು 4.87 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಇಲ್ಲಿಯ ತೀರ್ಥನಗರದಲ್ಲಿ ಬುಧವಾರ ನಡೆದಿದೆ. ರಾಚಪ್ಪ ಶಿವಯೋಗೇಪ್ಪ ಸುಂಕದ (38) ಎಂಬುವರ ಮನೆ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಒಳಗೆ ನುಗ್ಗಿ 4.87 ಲಕ್ಷ ರೂಪಾಯಿ ಮೌಲ್ಯದ 119 ಗ್ರಾಂ ಚಿನ್ನಾಭರಣ, 20 ಗ್ರಾಂ ಬೆಳ್ಳಿ ಆಭರಣ, 10 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.