

ಕಾಸರಗೋಡು: ಕಣ್ಣೂರು ಮುಂಡಾಯತ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 66ನೇ ರಾಜ್ಯಮಟ್ಟದ ಶಾಲಾ ಒಲಿಂಪಿಕ್ಸ್ ಟೇಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಕಾಸರಗೋಡು ವಿದ್ಯಾನಗರದ ತನ್‌ಬೀಹುಲ್ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿನಿ ಎ.ಎಂ.ಫಾತಿಮಾ ಚಿನ್ನದ ಪದಕ ಗಳಿಸಿದ್ದಾರೆ. ಫಾತಿಮಾ ಅವರು 63 ಕೆ.ಜಿ.ಯೊಳಗಿನ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ. ನ.8ರಿಂದ 12ರ ವರೆಗೆ ಮಧ್ಯಪ್ರದೇಶದ ವಿಧಿಶಾದಲ್ಲಿ ನಡೆಯಲಿರುವ ರಾಷ್ಟ್ರೀಯ ಶಾಲಾ ಟೇಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಕೇರಳದ ಪರವಾಗಿ ಸ್ಪರ್ಧಿಸಲಿದ್ದಾರೆ. ಟೇಕ್ವಾಂಡೋದಲ್ಲಿ ಮೊದಲ ಡಾನ್ ಬ್ಲ್ಯಾಕ್ ಬೆಲ್ಟ್ ಆಗಿರುವ ಫಾತಿಮಾ ಕಳೆದ ಐದು ವರ್ಷಗಳಿಂದ ಸತತವಾಗಿ ರಾಜ್ಯ ಟೇಕ್ವಾಂಡೋದಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಕಾಸರಗೋಡು ಯೋಧ ಟೆಕ್ವಾಂಡೋ ಅಕಾಡೆಮಿಯ ಮಾಸ್ಟರ್ ಜಯನ್ ಪೊಯಿನಾಚಿ ತರಬೇತುದಾರರಾಗಿದ್ದಾರೆ. ಜಮೀಲಾ ಮತ್ತು ವಕೀಲ, ದಿ.ಅಶ್ರಫ್ ದಂಪತಿಯ ಪುತ್ರಿ.