

ಗೋಣಿಕೊಪ್ಪ: ಮೈಸೂರಿನಲ್ಲಿ ಇತ್ತೀಚೆಗೆ ನಡೆದ 3ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅಪ್ಸರಾ ಜಯನ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಕರಾಟೆ ಶಿಕ್ಷಕ ಎಂ.ಬಿ. ಚಂದ್ರನ್ ಬಳಿ ತರಬೇತಿ ಪಡೆದಿದ್ದಾರೆ. ಶಾಲಾ ಸಂಯೋಜಕಿ ಅಮೃತಾ, ಶಿಕ್ಷಕಿ ಟಿ.ಜಿ.ಕಲ್ಪಾ, ಶಾಲೆಯ ಆಡಳಿತ ಮಂಡಳಿ ಸಲ್ಲಿಸಿದ್ದಾರೆ.