ಮಾಂಗಲ್ಯ ಸರ ಕಳವು ಮಾಡಿದ್ದ ಆರೋಪಿ ಬಂಧನ

25HNL4
Published on

ಹಾನಗಲ್ಲ: ಪಟ್ಟಣದ ವಿವೇಕಾನಂದ ನಗರದ ನಿವಾಸಿ ಭಾರತಿ ವಾಲಿಕಾರ ಎಂಬುವರ ಮನೆಯಿಂದ ಕಳವಾಗಿದ್ದ 50 ಗ್ರಾಂನ ಚಿನ್ನದ ಮಾಂಗಲ್ಯ ಸರವನ್ನು ಹಾನಗಲ್ಲ ಪೊಲೀಸರು ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಫೆ. 5ರಂದು ಭಾರತಿ ವಾಲಿಕಾರ ತಮ್ಮ ಮನೆಯಲ್ಲಿನ 50 ಗ್ರಾಂನ ಮಾಂಗಲ್ಯ ಸರ ಕಳವಾಗಿರುವ ಕುರಿತು ದೂರು ದಾಖಲಿಸಿದ್ದರು. ನಂತರ ಪೊಲೀಸರು ನಡೆಸಿದ ತನಿಖೆಯ ಸಂದರ್ಭದಲ್ಲಿ ಪಕ್ಕದ ಮನೆಯವರೇ ಕದ್ದಿರುವುದಾಗಿ ದೂರುದಾರರು ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣ ಬೆನ್ನಟ್ಟಿದ್ದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ಪಕ್ಕದ ಮನೆಯ ಭಾರತಿ ಲಿಂಗರಾಜ ಬಣಕಾರ ಎಂಬುವರು ಮಾಂಗಲ್ಯ ಸರ ಕದ್ದಿರುವುದು ಬೆಳಕಿಗೆ ಬಂದಿದೆ. ಮಾಂಗಲ್ಯ ಸರ ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿ ಭಾರತಿ ಲಿಂಗರಾಜ ಬಣಕಾರ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net