

ಗುಂಡ್ಲುಪೇಟೆ: ತಾಲೂಕಿನ ಬೊಮ್ಮಲಾಪುರ ಗ್ರಾಮದ ದೇವಾಲಯದಲ್ಲಿ ಗೋಲಕ ಕಳ್ಳತನವಾದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಇತ್ತೀಚೆಗೆ ಗ್ರಾಮದ ಹೊರವಲಯದಲ್ಲಿರುವ ಪಟ್ಟಲದಮ್ಮನವರ ದೇವಾಲಯದಲ್ಲಿ ಜಾತ್ರೆ ನಡೆಸಲಾಗಿತ್ತು. ಹೆಚ್ಚಿನ ಭಕ್ತರು ಗೋಲಕದಲ್ಲಿ ಹಣ ಹಾಕಿ ತಮ್ಮ ಹರಕೆ ತೀರಿಸಿದಿದ್ದರು. ಗೋಲಕದಲ್ಲಿ ಲಕ್ಷಾಂತರ ರೂ. ನಗನಾಣ್ಯ ಸಂಗ್ರಹವಾಗಿರುವ ಬಗ್ಗೆ ಮಾಹಿತಿಯಿದ್ದ ಕಳ್ಳರು ಭಾನುವಾರ ರಾತ್ರಿ ಬೀಗ ಮುರಿದು ಗೋಲಕ ಒಡೆದು ಕಳ್ಳತನ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಬಿ.ಟಿ.ಕವಿತಾ, ಡಿವೈಎಸ್‌ಪಿ ಲಕ್ಷಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಕಳ್ಳರ ಸುಳಿವು ಸಿಕ್ಕಿದ್ದು ಕೂಡಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.