ಗೋಕರ್ಣ ಮಹಾಬಲೇಶ್ವರ ಮಂದಿರದಲ್ಲಿ ಸೋಮವಾರದಿಂದ ಎಂದಿನಂತೆ ಎಲ್ಲ ಸೇವೆ

Mahabaleshwar_Temple Gokarna
Published on

ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದಲ್ಲಿ ಅ.5ರಿಂದ ಈ ಹಿಂದಿನಂತೆ ಎಲ್ಲ ಪ್ರಕಾರದ ಸೇವೆಗಳು ಪ್ರಾರಂಭವಾಗಲಿವೆ.

ಕಳೆದ ಮಾರ್ಚ್​ನಲ್ಲಿ ಕರೊನಾ ಆತಂಕ ಹೆಚ್ಚಾದ ತರುವಾಯ ಮಂದಿರದಲ್ಲಿ ನಿತ್ಯ ನೈಮಿತ್ತಿಕೆಗಳ ಹೊರತಾಗಿ ಉಳಿದೆಲ್ಲ ಸೇವೆಗಳನ್ನು ರದ್ದು ಪಡಿಸಿ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಕೆಲವು ದಿನಗಳ ಹಿಂದಿನಿಂದ ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಹಾಕಿದ ಭಕ್ತರಿಗೆ ಸ್ಯಾನಿಟೈಸರ್ ತರುವಾಯ ನಂದಿ ಮಂಟಪದ ವರೆಗೆ ಬಂದು ಆತ್ಮಲಿಂಗ ದರ್ಶನ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net