ದುಃಖ ದೂರ ಮಾಡುವ ದೇವಿ ಹಾಸನಾಂಬೆ; ಡಿಸಿಎಂ ಡಿಕೆಶಿ ಹೇಳಿಕೆ

ದುಃಖ ದೂರ ಮಾಡುವ ದೇವಿ ಹಾಸನಾಂಬೆ; ಡಿಸಿಎಂ ಡಿಕೆಶಿ ಹೇಳಿಕೆ
Published on

ಹಾಸನ: ದುರ್ಗೆಯ ಸ್ವರೂಪಿ, ಶಾರದೆ ಸ್ವರೂಪಿಯಾದ ತಾಯಿ ಹಾಸನಾಂಬೆ ಎಲ್ಲರಿಗೂ ದರ್ಶನ ಭಾಗ್ಯ ಕರುಣಿಸಿದ್ದಾಳೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಮಂಗಳವಾರ ಪತ್ನಿ ಉಷಾ ಹಾಗೂ ಕುಟುಂಬ ಸದಸ್ಯರೊಂದಿಗೆ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿದರು.

ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿ ದೇವತೆ. ದುಃಖ ದೂರ ಮಾಡುವ ದೇವಿಯಾಗಿದ್ದಾರೆ. ನೆಮ್ಮದಿ, ಶಾಂತಿಯ ಬದುಕನ್ನು ಕೊಡು ಎಂದು ಭಕ್ತರು ಆ ತಾಯಿಯಲ್ಲಿ ಬೇಡಿಕೊಳ್ಳುತ್ತಾರೆ. ಭಕ್ತನಿಗೂ, ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಎಲ್ಲ ಜನರು ವಿಶೇಷವಾದ ದರ್ಶನ ಪಡೆಯುತ್ತಿದ್ದಾರೆ. ಪ್ರತಿ ವರ್ಷ ಕೂಡ ದೇಗುಲಕ್ಕೆ ಬಂದು ತಾಯಿ ದರ್ಶನ ಪಡೆಯುತ್ತಿದ್ದೇನೆ. ಶಿಸ್ತಿನಿಂದ ವ್ಯವಸ್ಥೆಯಾಗಿದೆ. ಕೆಲವು ರಾಜಕಾರಣಿಗಳಿಗೆ ತೊಂದರೆ ಆಗಿರಬಹುದು. ಕೃಷ್ಣಬೈರೇಗೌಡ ಅವರ ನೇತೃತ್ವದಲ್ಲಿ ಬಹಳ ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಮುಖ್ಯಮಂತ್ರಿ ಸ್ಥಾನ ಸಿಗುವ ವಿಚಾರದಲ್ಲಿ ನಾನುಂಟು, ಆ ತಾಯಿ ಉಂಟು. ನಮಗೆ, ನಿಮಗೆ ಎಲ್ಲರಿಗೂ ಭಗವಂತ ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಚುಟುಕಾಗಿ ಹೇಳಿ ಹೊರಟರು.

ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಸಂಸದ ಶ್ರೇಯಸ್ ಎಂ.ಪಟೇಲ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ, ಶೃಂಗೇರಿ ಶಾಸಕ ರಾಜೇಗೌಡ, ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net