

ಬೆಟ್ಟದಪುರ: ಇಲ್ಲಿಗೆ ಸಮೀಪದ ಚಾಮರಾಯನಕೋಟೆ ಗ್ರಾಮದ ರೈತ ವೆಂಕಟೇಶ್‌ಗೆ ಸೇರಿದ ಮೇಕೆ ಇತ್ತಿಚೆಗೆ ಚಿರತೆ ದಾಳಿಗೆ ಬಲಿಯಾಗಿದೆ.
ಸಮೀಪದ ಕಂಬೀಪುರ, ಹೆಗ್ಗತ್ತೂರು, ಗ್ರಾಮದ ಸುತ್ತಮುತ್ತ ಚಿರತೆಯ ಹಾವಳಿ ಹೆಚ್ಚಾಗಿದ್ದು, ಈ ವ್ಯಾಪ್ತಿಯ ರೈತರು ಜಮೀನಿನಲ್ಲಿ ಕೆಲಸ ಮಾಡಲು ಭಯಬೀತರಾಗಿದ್ದಾರೆ. ವಾರದ ಹಿಂದೆ ಇದೇ ಭಾಗದಲ್ಲಿ ಒಂದು ಮೇಕೆಯನ್ನು ಕೊಂದು ಹಾಕಿತ್ತು. ತಕ್ಷಣದಲ್ಲಿಯೇ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಬೋನು ಇಡುವಂತೆ ಹಾಗೂ ನಷ್ಟವಾಗಿರುವ ರೈತರಿಗೆ ಪರಿಹಾರ ದೊರೆಯುವಂತಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಬೋನ್ ಇಡುವ ಭರವಸೆ ನೀಡಿದರು.