ಚಿರತೆ ದಾಳಿಗೆ ಮೇಕೆ ಬಲಿ

Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದೆ.

ಗ್ರಾಮದ ರೈತ ಗಣೇಶ್ ಅವರ ಮೇಕೆ ಬಲಿಯಾಗಿದ್ದು, ಎಂದಿನಂತೆ ತಮ್ಮ ಮನೆಯ ಬಳಿಯ ಕೊಟ್ಟಿಗೆಯಲ್ಲಿ ದನಕರುಗಳೊಂದಿಗೆ ಮೇಕೆಯನ್ನು ಕಟ್ಟಿಹಾಕಿದ್ದಾರೆ. ತಡರಾತ್ರಿ ಬಂದಂತಹ ಚಿರತೆಯು ಮೇಕೆ ಮೇಲೆ ದಾಳಿ ಮಾಡಿ, ಎಳೆದುಕೊಂಡು ಹೋಗಿದೆ. ಬುಧವಾರ ಬೆಳಗ್ಗೆ ಮನೆಯವರು ನೋಡಿದಾಗ ಮೇಕೆ ಕಾಣಿಸಲಿಲ್ಲ. ಬಳಿಕ ಅಕ್ಕಪಕ್ಕ ಜಾಗದಲ್ಲಿ ಹುಡುಕಿದರೂ ಯಾವುದೇ ಸುಳಿವು ಸಿಗಲಿಲ್ಲ. ಆದರೆ ಗುರುವಾರ ಬೆಳಗ್ಗೆ ಕೊಟ್ಟಿಗೆಯಿಂದ ಸುಮಾರು 400 ಮೀ. ದೂರದಲ್ಲಿ ಮೇಕೆಯ ಕಳೇಬರ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net