ಗೋಶಾಲೆ ನಿರ್ವಹಣೆ ಮಾಹಿತಿ ಪಡೆದ ಡಿಸಿ

06 gvt 02
ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ಐತಿಹಾಸಿಕ ಪ್ರಸಿದ್ಧ ವಾಲಿಕಿಲ್ಲಾ ಮ್ಯಾಗೋಟದ ಆದಿಶಕ್ತಿ ದೇವಾಲಯಕ್ಕೆ ಡಿಸಿ ಡಾ.ಸುರೇಶ ಇಟ್ನಾಳ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಎಡಿಸಿ ಸಿದ್ರಾಮೇಶ, ತಹಸೀಲ್ದಾರ್ ಯು.ನಾಗರಾಜ್ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಆನೆಗೊಂದಿ ಬಳಿಯ ಐತಿಹಾಸಿಕ ಪ್ರಸಿದ್ಧ ವಾಲಿಕಿಲ್ಲಾ ಮ್ಯಾಗೋಟದ ಆದಿಶಕ್ತಿ ದೇವಾಲಯಕ್ಕೆ ಡಿಸಿ ಡಾ.ಸುರೇಶ ಇಟ್ನಾಳ್ ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ವಾಲಿಕಿಲ್ಲಾ ಮ್ಯಾಗೋಟಕ್ಕೆ ತೆರಳಿ ದೇವಿ ದರ್ಶನ ಪಡೆದರು. ರಾಶಿ ವನದ ಮಾಹಿತಿ ಪಡೆದುಕೊಂಡರು. ಗೋಶಾಲೆ, ಶ್ರೀಕೃಷ್ಣಮೂರ್ತಿ ವೀಕ್ಷಿಸಿದರು. ದೇವಾಲಯದ ಕಾರ್ಯ ಮತ್ತು ಗೋಶಾಲೆ ನಿರ್ವಹಣೆ ಕುರಿತು ಮುಖ್ಯಸ್ಥ ಬ್ರಹ್ಮಾನಂದ ಸ್ವಾಮೀಜಿ, ವ್ಯವಸ್ಥಾಪಕ ರಾಜಣ್ಣ ಮಾಹಿತಿ ನೀಡಿದರು.

ನಂತರ ಪಂಪಾಸರೋವರ ವಿಜಯಲಕ್ಷ್ಮಿದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ನವೀಕರಣ ಕಾಮಗಾರಿ ಮಾಹಿತಿ ಪಡೆದುಕೊಂಡರು. ಅಂಜನಾದ್ರಿ ಬೆಟ್ಟಕ್ಕೆ ತೆರಳಿ ವಿಶೇಷ ಅರ್ಚನೆ ಸಲ್ಲಿಸಿದರು. ಬೆಟ್ಟದ ಮೇಲಿಂದಲೇ ಅಂಜನಾದ್ರಿಯಲ್ಲಿ ಕೈಗೆತ್ತಿಕೊಂಡ ಶಾಪಿಂಗ್ ಕಾಂಪ್ಲೆಕ್ಸ್, ವಸತಿ ಗೃಹ, ಪ್ರದಕ್ಷಿಣೆ ಪಥ, ರೋಪವೇ ಬಗ್ಗೆ ಮಾಹಿತಿ ಪಡೆದರು.

ಭೂ ಸ್ವಾಧೀನ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಪೂಜೆ ವಿಷಯದಲ್ಲಿ ವಿದ್ಯಾದಾಸ ಬಾಬಾ ಅಧಿಕಾರಿಗಳ ಮುಂದೆಯೇ ಕಿರಿಕ್ ಮಾಡಿದ್ದು, ಮುಜರಾಯಿ ಇಲಾಖೆಯಿಂದ ನಿಯೋಜಿಸಿದ ಅರ್ಚಕರೇ ಪೂಜೆ ಸಲ್ಲಿಸಿದರು. ಎಡಿಸಿ ಸಿದ್ರಾಮೇಶ, ತಹಸೀಲ್ದಾರ್ ಯು.ನಾಗರಾಜ್, ದೇವಾಲಯ ಸಮಿತಿ ಸಿಇಒ ಪ್ರಕಾಶರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net