ಆನೆಗೊಂದಿ ಉತ್ಸವ ಆಚರಣೆಗೆ ಮುಂದಾಗಿ

Untitled design(26)
Published on

ಗಂಗಾವತಿ: ಆನೆಗೊಂದಿ ಉತ್ಸವ ಆಚರಿಸಲು ಒತ್ತಾಯಿಸಿ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಕಲಾವಿದರೊಂದಿಗೆ ನಗರದ ತಾಲೂಕಾಡಳಿತ ಸೌಧದ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಹಂಪಿಯಷ್ಟೆ ಆನೆಗೊಂದಿ ಪ್ರಾಮುಖ್ಯತೆ ಪಡೆದಿದ್ದು, ವಿಜಯನಗರ ಸಾಮ್ರಾಜ್ಯದ ತೊಟ್ಟಿಲಾಗಿತ್ತು. ವಿಜಯನಗರ ಆಡಳಿತಾವಧಿಯಲ್ಲಿನ ಪರಂಪರೆ, ವೈಭವ ಮರುಕಳಿಸಲು ಮಾಜಿ ಸಚಿವ ಎಂ.ಪಿ.ಪ್ರಕಾಶ ಆನೆಗೊಂದಿ ಉತ್ಸವಕ್ಕೆ ಚಾಲನೆ ನೀಡಿದ್ದರು. ಹಂಪಿ ಉತ್ಸವದೊಂದಿಗೆ ಆನೆಗೊಂದಿ ಉತ್ಸವ ಆಚರಿಸುವ ಬಗ್ಗೆ ಜನರ ಒತ್ತಾಯವಾಗಿದ್ದರೂ, ಆನೆಗೊಂದಿ ಉತ್ಸವಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ತೊರುತ್ತಿಲ್ಲ. ಅದರಂತೆ ಕನಕಗಿರಿ ಉತ್ಸವನ್ನು ಜಾತ್ರೆ ಸಂದರ್ಭದಲ್ಲಿ ಹಮ್ಮಿಕೊಳ್ಳದೇ ಪ್ರತ್ಯೇಕ ಆಚರಿಸಬೇಕು. ಕಲಾವಿದರು, ಸಾಹಿತಿಗಳು ಸೇರಿ ಇತರೆ ಕ್ಷೇತ್ರದ ಸಾಧಕರ ಅನುಕೂಲಕ್ಕಾಗಿ ಆನೆಗೊಂದಿ ಮತ್ತು ಕನಕಗಿರಿ ಉತ್ಸವ ಪ್ರತ್ಯೇಕ ಆಚರಿಸುವಂತೆ ಒತ್ತಾಯಿಸಿದರು. ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು.

ಪದಾಧಿಕಾರಿಗಳಾದ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೆಂದ್ರ ಕಡೆಬಾಗಿಲು, ದುರ್ಗೇಶ್ ಹೊಸಳ್ಳಿ, ಬಸವರಾಜ್ ನಾಯಕ, ಸೋಮು, ಮುತ್ತಣ್ಣ, ಶಬ್ಬಿರ್ ಹುಸೇನ್, ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net