

ಮಸ್ಕಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿಯಿಂದ ತೊಂದರೆ ಅನುಭವಿಸುತ್ತಿದ್ದ ವಾಹನ ಸವಾರರ ಸಮಸ್ಯೆಗೆ ಸ್ಪಂದಿಸಿದ ಪುರಸಭೆ 18 ಬಿಡಾಡಿ ದನಕರುಗಳನ್ನು ಮುದಗಲ್‌ನ ಶ್ರೀ ಶರಣಮ್ಮ ಮಾತೆ ಗೋಶಾಲೆಗೆ ಶುಕ್ರವಾರ ರವಾನಿಸಿದೆ.
ಬಿಡಾಡಿ ದನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ಅಡ್ಡಾ-ದಿಡ್ಡಿಯಾಗಿ ಮಲಗುತ್ತಿದ್ದವು. ಇದರಿಂದ ಬೈಕ್, ಬಸ್, ಲಾರಿ ಚಾಲಕರಿಗೆ ಕಿರಿಕಿರಿ ಉಂಟಾಗಿತ್ತು. ನಿತ್ಯ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿತ್ತು.
ದ್ವಿಚಕ್ರ ವಾಹನ ಸವಾರರು ದನಗಳಿಗೆ ಡಿಕ್ಕಿ ಹೊಡೆದು ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಸಾಕಷ್ಟು ಘಟನೆಗಳು ಜರುಗಿವೆ. ಪುರಸಭೆ ಸಿಬ್ಬಂದಿ ದನಗಳ ಮಾಲೀಕರಿಗೆ ನೋಟಿಸ್ ನೀಡಿ, ದನಗಳನ್ನು ರಸ್ತೆಗೆ ಬಿಡಬಾರದು. ನಿರ್ಲಕ್ಷಿಸಿದರೆ ಗೋಶಾಲೆಗೆ ಕಳುಹಿಸಲು ಕ್ರಮಕೈಗೊಳ್ಳಲಾಗುವುದು ಎಂದು ಧ್ವನಿವರ್ಧಕ ಮೂಲಕ ಸೂಚನೆ ನೀಡಿತ್ತು.