

ಬ್ರಹ್ಮಾವರ: ಜಿಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನ ಮಕ್ಕಳಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸಲು ಭತ್ತ ಬೆಳೆಯುವತ್ತ ಮಕ್ಕಳ ಚಿತ್ತ ಎಂಬ ಕಾರ್ಯಕ್ರಮ ನಡೆಯಿತು.
ಉಡುಪಿ ಉದ್ಯಾವರದ ಕುತ್ಪಾಡಿಯ ಕೃಷಿ ಭೂಮಿಯಲ್ಲಿ ಸಂಪ್ರದಾಯ ಶೈಲಿಯಲ್ಲಿ ಕಂಬಳ ಕೋಣಗಳಿಂದ ಗದ್ದೆ ಉಳುಮೆ ವಾಡಿದ ಬಳಿಕ ಸ್ಥಳೀಯ ರೈತರೊಂದಿಗೆ ನೇಜಿಯನ್ನು ನಾಟಿ ವಾಡುವುದರ ಮೂಲಕ ಮಕ್ಕಳು ಕೃಷಿಯ ಅನುಭವ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸ್ಥಳೀಯ ರೈತರನ್ನು ಸನ್ಮಾಯಿಸಲಾಯಿತು. ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಪ್ರಾಂಶುಪಾಲ ಜಾರ್ಜ್ ಕುರಿಯನ್ ಕೃಷಿ ಭೂಮಿಯಲ್ಲಿ ಮಕ್ಕಳ ಜೊತೆಯಿದ್ದು ಸ್ಫೂರ್ತಿ ತುಂಬಿದರು.