ಜಾಗತಿಕ ಸಮಸ್ಯೆಗಳಿಗೆ ಬುದ್ಧನ ತತ್ವ ಪರಿಹಾರ ಡಾ.ಸುನೀಲಕುಮಾರ ಎಚ್.ವಂಟಿ

bjp
Published on

ಅವರಾದ(ಬಿ)ಯ ಮೈತ್ರಿ ಬುದ್ಧವಿಹಾರದಲ್ಲಿ ೨೫೬೯ನೇ ಬುದ್ಧ ಪೂರ್ಣಿಮೆ

ಕಲಬುರಗಿ: ಹಿಂಸೆ, ಅನ್ಯಾಯ, ಅಶಾಂತಿ, ಶೋಷಣೆ, ಭಯೋತ್ಪಾದನೆಯಂತಹ ಜಾಗತಿಕ ಸಮಸ್ಯೆಗಳಿಗೆ ಮಹಾತ್ಮ ಗೌತಮ ಬುದ್ಧ ಅವರು ಸಾವಿರಾರು ವರ್ಷಗಳ ಹಿಂದೆಯೇ ನೀಡಿರುವ ಹಾಗೂ ಅವುಗಳನ್ನು ಆಚರಿಸಿ ತೋರಿಸಿರುವ ತತ್ವಗಳು ಔಷಧಿಯಂತೆ ಕಾರ್ಯಮಾಡುತ್ತವೆ ಎಂದು ಗುವಿವಿ ಸೀಡಿಕೇಟ್ ಮಾಜಿ ಸದಸ್ಯ, ಚಿಂತಕ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.

ತಾಲೂಕಿನ ಅವರಾದ(ಬಿ) ಗ್ರಾಮದ ಮೈತ್ರಿ ಬುದ್ಧ ವಿಹಾರದಲ್ಲಿ ಸಮತಾ ಸೈನಿಕ ದಳದ ಜಿಲ್ಲಾ ಘಟಕ ಮತ್ತು ಮದನಕರ್ ಪರಿವಾರದ ಜಂಟಿ ಆಶ್ರಯದಲ್ಲಿ ಸೋಮವಾರ ಜರುಗಿದ ‘೨೫೬೯ನೇ ಬುದ್ಧ ಪೂರ್ಣಿಮೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಎಚ್.ಬಿಪಾಟೀಲ, ಪ್ರಸ್ತುತ ಸಮಾಜದಲ್ಲಿಯೂ ಜನರು ಮೌಢ್ಯತೆ, ಕಂದಾಚಾರ, ಅಂಧಶೃದ್ಧೆಗಳAತಹ ಆಚರಣೆಯಲ್ಲಿರುವುದು ಬೇಸರದ ಸಂಗತಿಯಾಗಿದ್ದು, ಇಂತಹ ಅನಿಷ್ಠತೆಗಳಿಂದ ಹೊರಬರಬೇಕು. ವೈಚಾರಿಕತೆ ಮೈಗೂಡಿಸಿಕೊಳ್ಳಬೇಕು. ಬುದ್ಧ-ಬಸವ-ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳು ಅಳವಡಿಸಿಕೊಳ್ಳಬೇಕು. ‘ಬುದ್ಧ’ ಎಂದರೆ ‘ಶಾಂತಿ’, ‘ಜ್ಞಾನ’ದ ಸಂಕೇತವಾಗಿದ್ದಾರೆ. ಅವರ ತತ್ವದ ಮಹಾ ಬೆಳಕಿನಲ್ಲಿ ಸಾಗಿದರೆ ಬದುಕು ಸುಂದರವಾಗುತ್ತದೆ. ಬುದ್ಧನ ಸಂದೇಶ ಪಾಲಿಸುವುದು ತುಂಬಾ ಅಗತ್ಯವಾಗಿದೆಯೆಂದು ನುಡಿದರು.

ಚಿಂತಕ ಅಶೋಕ ಕಾಳೆ, ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವ ಟಿ.ಮಾಲೆ, ಜಿಲ್ಲಾಧ್ಯಕ್ಷ ಈರಣ್ಣ ಜಾನೆ, ಸಚಿನ್ ಮದನಕರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸುಜಯ್ ಎಸ್.ವಂಟಿ, ಮನೋಜಕುಮಾರ ನಿರ್ಮಲೆ, ಸೂರ್ಯಕಾಂತ ಹಳ್ಳಿಖೇಡ, ವಿಜಯಕುಮಾರ ಉದ್ದಾ, ಶಿವಲಿಂಗ್ಮ ಸಾವಳಗಿ, ಶರಣು ಬಿ.ಮುದ್ನಾಳಕರ್, ಮಹಾದೇವ ನಾಟಿಕಾರ, ಪದ್ಮಾವತಿ ಅಟ್ಟೂರ್, ಇಂದುಮತಿ ಭರತನೂರ, ಮನೋಹರ ಭಾವಿಮನಿ, ಕಲಾವತಿ ಮದನಕರ್ ಸೇರಿದಂತೆ ಅನೇಕರು ಭಾಗವಸಿದ್ದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net