

ಬೆಂಗಳೂರು: ಗ್ಲೋಬಲ್ ಗಾರ್ನರ್ ಸಂಸ್ಥೆ ಮತ್ತು ವಿಜಯವಾಣಿ, ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ 17 ಮತ್ತು 18ರಂದು ‘ಗ್ಲೋಬಲ್ ಗಾರ್ನರ್ ಎಕ್ಸ್ಪೋ’ ಆಯೋಜಿಸಲಾಗಿದೆ.
ಮೇಳವು ಅರಮನೆ ಮೈದಾನದಲ್ಲಿರುವ ಪ್ರಿನ್ಸಸ್ ಗಾಲ್ಪ್ ಗೇಟ್ನಲ್ಲಿ ನಡೆಯಲಿದೆ. ಗ್ರಾಹಕರು ಮತ್ತು ಉತ್ಪಾದಕರು ಇಬ್ಬರಿಗೂ ಸಹಾಯವಾಗುವ ರೀತಿಯಲ್ಲಿ ಮೇಳವನ್ನು ಆಯೋಜಿಸಲಾಗಿದೆ. ಹೊಸದಾಗಿ ಬಿಜಿನೆಸ್ ಆರಂಭಿಸುವವರಿಗೆ ಮಾಹಿತಿ, ತರಬೇತಿ ನೀಡಲಾಗುತ್ತದೆ. ಹೊಸದಾಗಿ ಉತ್ಪನ್ನಗಳನ್ನು ತಯಾರಿಸುವವರಿಗೆ ಮಾರುಕಟ್ಟೆ ಕಲ್ಪಿಸಲು ಬೇಕಾದ ಸಿದ್ಧತೆಗಳನ್ನು ಕೂಡ ಮೇಳದಲ್ಲಿ ತಿಳಿಸಿಕೊಡಲಾಗುತ್ತದೆ. ಅದೇ ರೀತಿ, ಇಲ್ಲಿ ಯಾವುದೇ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.
ಈ ಕುರಿತು ಮಾತನಾಡಿದ ಗ್ಲೋಬಲ್ ಗಾರ್ನರ್ ಸಂಸ್ಥೆ ಕರ್ನಾಟಕ ಮತ್ತು ಗೋವಾ ಮಾರುಕಟ್ಟೆ ಮುಖ್ಯಸ್ಥ ದೇವರಾಜ್, ಇದೊಂದು ಬಹು ಆಯಾಮದ ಮೇಳವಾಗಿರಲಿದೆ. ಇಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವ್ಯಾಪಾರಿಗಳು, ಗ್ರಾಹಕರು, ಉತ್ಪಾದಕರು, ನವೋದ್ಯಮ ಆರಂಭಿಸಲು ಚಿಂತನೆ ನಡೆಸುತ್ತಿರುವವರು, ಹೊಸದಾಗಿ ಬಿಜಿನೆಸ್ ಆರಂಭಿಸಲು ಸಹಾಯ ಬಯಸುತ್ತಿರುವವರು ಸೇರಿ ಎಲ್ಲ ವರ್ಗದ ಜನರಿಗೆ ಸಹಾಯವಾಗಲಿದೆ ಎಂದು ವಿವರಿಸಿದ್ದಾರೆ.
ಬಹುಶಿಸ್ತೀಯ ಉಚಿತ ವೇದಿಕೆ: ಹೊಸದಾಗಿ ಉತ್ಪನ್ನಗಳನ್ನು ತಯಾರಿಸಿ ಮಾರ್ಕೆಟ್ ಮಾಡುವುದು ಹೇಗೆಂದು ತಿಳಿಯದಿದ್ದರೆ ಮೇಳದಲ್ಲಿ ವೇದಿಕೆ ಕಲ್ಪಿಸಲಾಗುತ್ತದೆ. ಅದೇ ರೀತಿ ಈಗಾಗಲೇ ಮಾರುಕಟ್ಟೆ ಮಾಡುತ್ತಿರುವವರಿಗೆ ಮಾರುಕಟ್ಟೆ ವಿಸ್ತರಿಸಲು ಬೇಕಾದ ಕೌಶಲಗಳನ್ನು ಕೂಡ ನೀಡಲಾಗುತ್ತದೆ ಎಂದು ದೇವರಾಜ್ ಮಾಹಿತಿ ನೀಡಿದರು. ಗ್ಲೋಬಲ್ ಗಾರ್ನರ್ ಸಂಸ್ಥೆಯಲ್ಲಿ 20 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ವಸ್ತುಗಳಿದ್ದು, ಸುಲಭವಾಗಿ ಖರೀದಿಸಬಹುದಾಗಿದೆ. ಎಲೆಕ್ಟ್ರಾನಿಕ್ಸ್ ಪರಿಕರಗಳು ಇಲ್ಲಿ ಲಭ್ಯವಾಗಲಿವೆ. ಈ ಎಲ್ಲ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಗ್ರಾಹಕರು ಖರೀದಿ ಮಾಡಬಹದು ಎಂದು ತಿಳಿಸಿದರು.
ಮೇಳದಲ್ಲಿ ಏನೆಲ್ಲ ಇರಲಿದೆ? * ಹೊಸದಾಗಿ ಬಿಜಿನೆಸ್ ಆರಂಭಿಸುವವರಿಗೆ ಉತ್ತಮ ಅವಕಾಶ * ಯಾವುದೇ ಕ್ಷೇತ್ರದ ಫ್ರಾಂಚೈಸಿ ಮಾರಲು ಅಥವಾ ಖರೀದಿ ಮಾಡಲು ಅವಕಾಶ * ಬಿಜಿನೆಸ್ ವೃದ್ಧಿಸಲು ಹೊಸ ಚಿಂತನೆಗಳಿಗೆ ವೇದಿಕೆ * ಟ್ರಾವೆಲ್ ಬಿಜಿನೆಸ್ ಆರಂಭಿಸಲು ಯೋಚನೆ ಮಾಡುತ್ತಿರುವವರಿಗೆ ಮಾರ್ಕೆಟ್ ಮಾಡಲು ಬೇಕಾದ ಸೌಲಭ್ಯಗಳು * ಆಹಾರ ಮೇಳ
ಗ್ಲೋಬಲ್ ಗಾರ್ನರ್ ಎಕ್ಸ್ಪೋ ಬಹು ಆಯಾಮದ ಮೇಳವಾಗಿದೆ. ಗ್ರಾಹಕರು, ಉತ್ಪಾದಕರು, ವ್ಯಾಪಾರಿಗಳು ಹಾಗೂ ಹೊಸದಾಗಿ ಬಿಜಿನೆಸ್ ಶುರು ಮಾಡಲು ಚಿಂತನೆ ನಡೆಸುತ್ತಿರುವವರಿಗೆ ಇದೊಂದು ವೇದಿಕೆಯಾಗಿದೆ. ಪ್ರತಿಯೊಬ್ಬರು ಈ ವೇದಿಕೆಯನ್ನು ಬಳಸಿಕೊಳ್ಳಬೇಕು.
| ದೇವರಾಜ್ ಗ್ಲೋಬಲ್ ಗಾರ್ನರ್ ಸಂಸ್ಥೆ ಕರ್ನಾಟಕ ಮತ್ತು ಗೋವಾ ಮಾರುಕಟ್ಟೆ ಮುಖ್ಯಸ್ಥ