ವಿಶ್ವ ಆದಿವಾಸಿ ಜನರ ದಿನ: ಭಾರಿ ಯಶಸ್ಸು ಕಂಡ ಗ್ಲೋಬಲ್​ ಕಲ್ಚರ್​ ಸಂಗೀತ ಉತ್ಸವ! Global Culture Music Festival 2025

Global Culture Music Festival 2025
Published on

Global Culture Music Festival 2025: ಬೆಂಗಳೂರು ನಗರದ ಗಾರ್ಡನ್​ ಸಿಟಿ ಯೂನಿವರ್ಸಿಟಿಯಲ್ಲಿ ಕಳೆದ ಶನಿವಾರ (ಆಗಸ್ಟ್​ 09) ನಡೆದ 2025ನೇ ಸಾಲಿನ ಗ್ಲೋಬಲ್​ ಕಲ್ಚರ್​ ಸಂಗೀತ ಉತ್ಸವ ಅದ್ಧೂರಿ ಯಶಸ್ಸು ಕಂಡಿತು. ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬುಡಕಟ್ಟು ಹಾಗೂ ಜಾನಪದ ಸಮುದಾಯದ ಕಲೆಗಳನ್ನು ಕಂಡು ಉಲ್ಲಾಸಗೊಂಡರು.

ವಿಶ್ವ ಆದಿವಾಸಿ ಜನರ ದಿನಾಚರಣೆ ಅಂಗವಾಗಿ ಬುಡಕಟ್ಟು ಮತ್ತು ಜಾನಪದ ಸಮುದಾಯಗಳಿಗೆ ಸಂಗೀತ ಉತ್ಸವನ್ನು ಸಮರ್ಪಿಸಲಾಯಿತು. ಗ್ಲೋಬಲ್ ಕಲ್ಚರ್ ಆರ್ಗನೈಸೇಶನ್, ಖಾಸಗಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿತು.

ಐದು ಬುಡಕಟ್ಟು ಮತ್ತು ಜಾನಪದ ಗುಂಪುಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಲು ಈ ಸಂಗೀತ ಉತ್ಸವ ಸೇತುವೆಯಾಯಿತು. ಗೊರವ, ನಗರಿ, ಗೊಂಡ, ಜೇನುಕುರುಬ ಮತ್ತು ಕುಡಿಯ ಸಮುದಾಯ, 600ಕ್ಕೂ ಅಧಿಕ ವಿದ್ಯಾರ್ಥಿಗಳ ಪ್ರೇಕ್ಷಕರನ್ನು ತಮ್ಮ ಪ್ರದರ್ಶನಗಳೊಂದಿಗೆ ರಂಜಿಸಿದರು. ಜಾನಪದ ಕಲೆಗಳ ವೈಭವ ಕಂಡು ವಿದ್ಯಾರ್ಥಿಗಳು ಮನಸೂರೆಗೊಂಡರು.

ಅಂದಹಾಗೆ ಈ ಉತ್ಸವದ ಉದ್ದೇಶ, ಆದಿವಾಸಿ ಸಮುದಾಯಗಳ ಸಾಂಸ್ಕೃತಿಕ ಪರಂಪರೆ ಮತ್ತು ಪರಿಸರದಲ್ಲಿ ಅವರ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದಾಗಿತ್ತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪದ್ಮಶ್ರೀ ಮಂಜಮ್ಮ ಜೋಗತಿ, ಪದ್ಮಶ್ರೀ ರಾಣಿ ಮಚಯ್ಯ, ಪದ್ಮಶ್ರೀ ಟಿ. ಸೋಮಣ್ಣ ಅವರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮತ್ತಷ್ಟು ಮೆರಗು ತುಂಬಿದರು.

ಜಿಸಿಯು ಕುಲಪತಿ ಡಾ. ಜೋಸೆಫ್ ವಿಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. 5 ವಿಭಿನ್ನ ಬುಡಕಟ್ಟು ಹಾಗು ಜನಪದ ಗುಂಪುಗಳ ತಮ್ಮ ಕಲೆ ಪ್ರದರ್ಶಿಸಿದರು. ಇದೇ ಮೊದಲ ಬಾರಿಗೆ ಒಂದೇ ಸೂರಿನ ಅಡಿ ಪದ್ಮಶ್ರೀ ವಿಜೇತ ಕಲಾವಿದರು ಕಾರ್ಯಕ್ರಮ ಉದ್ಘಾಟಿಸಿದ್ದು, ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net