

Jaya Bachchan: ಬಾಲಿವುಡ್ ಹಿರಿಯ ನಟಿ ಮತ್ತು ಸಮಾಜವಾದಿ ಪಕ್ಷದ ರಾಜ್ಯಸಭೆ ಸಂಸದೆ ಜಯಾ ಬಚ್ಚನ್ ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯೊರ್ವನನ್ನು ತಳ್ಳಿ, ಬೈದಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದೆಹಲಿ ಕಾನ್ಸ್ಟಿಟ್ಯೂಷನ್ ಕ್ಲಬ್ ಮೆಟ್ಟಿಲು ಮುಂಭಾಗದಲ್ಲಿ ಸಹ ಸಂಸದರ ಜೊತೆ ಜಯಾ ಬಚ್ಚನ್ ಮಾತನಾಡುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮೊಬೈಲ್ ಹಿಡಿದು ಅವರ ಪಕ್ಕಕ್ಕೆ ಹೋಗಿದ್ದಾರೆ. ತಕ್ಷಣ ಅದನ್ನ ಗಮನಿಸಿದ ಅವರು, ಏನು ಇದು? ಎಂದು ಆ ವ್ಯಕ್ತಿಯನ್ನು ತಳ್ಳಿ ಬಯ್ಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ತಕ್ಷಣ ಸೆಲ್ಫಿ ತೆಗೆದುಕೊಳ್ಳಲು ಬಂದ ವ್ಯಕ್ತಿ ಕ್ಷಮೆ ಕೇಳಿ ಪಕ್ಕಕ್ಕೆ ತೆರೆಳಿದ್ದಾನೆ.
ಹಿರಿಯ ನಟಿ ಮತ್ತು ಸಂಸದೆ ಬಚ್ಚನ್ ಫೋಟೋ ತೆಗೆಸಿಕೊಳ್ಳಲು ಬಂದಾಗ ಜನರನ್ನು ಬೈದಿರುವುದು ಇದೇ ಮೊದಲಲ್ಲ. ತಮ್ಮ ಹತ್ತಿರಕ್ಕೆ ಬಂದ ಜನರನ್ನು ಹಲವು ಬಾರಿ ಬೈದಿರುವ ಅನೇಕ ಉದಾಹರಣೆಗಳಿವೆ. ಈ ಕುರಿತು ತಮ್ಮ ಮೊಮ್ಮಗಳು ಮತ್ತು ಉದ್ಯಮಿ ನವ್ಯಾ ನವೇಲಿ ಜೊತೆಗಿನ ಪಾಡ್ಕಾಸ್ಟ್ನಲ್ಲಿ ತಮ್ಮ ಈ ನಡವಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಿಮ್ಮ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವವರನ್ನು ನಾನು ತಿರಸ್ಕರಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ಅದನ್ನು ಸಹಿಸಲಾರೆ. ನನಗೆ ಅದು ಅಸಹ್ಯ. ನನ್ನ ವೈಯಕ್ತಿಕ ಜೀವನದಲ್ಲಿ ತಲೆ ಹಾಕುವ, ಹಾಗೂ ಆ ಉತ್ಪನ್ನಗಳನ್ನು ಮಾರಾಟ ಮಾಡಿ ಹೊಟ್ಟೆ ತುಂಬಿಕೊಳ್ಳುವ ಜನರ ವಿರುದ್ಧ ನನಗೆ ಅಸಹ್ಯವಿದೆ ಎಂದಿದ್ದಾರೆ. ನಾನು ಎಷ್ಟು ಬಾರಿ ಹೇಳುತ್ತೇನೆ, ನಿಮಗೆ ನಾಚಿಕೆ ಆಗಲ್ಲವೇ ಎಂದು ಕೇಳುತ್ತೇನೆ. ಈ ಕುರಿತು ನನ್ನನ್ನು ಟ್ರೋಲ್ ಮಾಡಿದ್ರು, ಟೀಕಿಸಿದ್ರು ಅದ್ಯಾವುದೂ ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲ ಎಂದಿದ್ದರು.
ನನ್ನ ಎಲ್ಲ ಕೋಪದ ಭಾಷಣಗಳನ್ನು ಯುಟ್ಯೂಬ್, ಇನ್ಸ್ಟಾಗ್ರಾಂ, ಟ್ವಿಟರ್ನಲ್ಲಿ ಹಾಕಿ ತಮ್ಮ ಜೀವನೋಪಾಯವನ್ನು ಗಳಿಸಲು ಹೋದರೆ ನಾನು ಅವರನ್ನು ಮೆಚ್ಚುತ್ತೇನೆ. ನಿಮಗೆ ನಮ್ಮ ಬಗ್ಗೆ ವೈಯಕ್ತಿಕವಾಗಿ ಒಂದು ಅಭಿಪ್ರಾಯವಿದೆ, ಮಾಡುವ ಕೆಲಸದ ಬಗ್ಗೆ ಅಭಿಪ್ರಾಯದ ನನಗೆ ಅರ್ಥವಾಗಿದೆ. ಆದರೆ ನಾನು ಎಲ್ಲೋ ಹೋಗುವಾಗ, ಫೋಟೋ ತೆಗೆದುಕೊಳ್ಳಲು ಯಾಕೆ ಒಳ ನುಗ್ಗುತ್ತೀರಿ. ನಾವು ಮನುಷ್ಯರಲ್ಲವೇ ಎಂದು ಹೇಳಿದ್ದರು.(ಏಜೆನ್ಸೀಸ್)