

ಕೈಲಾಂಚ : ಹೋಬಳಿಯ ಚನ್ನಮಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆರ್. ಕುಮಾರ್, ಉಪಾಧ್ಯಕ್ಷರಾಗಿ ಚಂದ್ರಮ್ಮ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆವರಣದಲ್ಲಿ ಗುರುವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆರ್.ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಮ್ಮ ಹೊರತು ಪಡಿಸಿ ಬೇರಾರೂ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಪುರುಷೋತ್ತಮ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ೋಷಿಸಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು, ಗ್ರಾಮಸ್ಥರು, ಮುಖಂಡರು, ಹಾಲು ಉತ್ಪಾದಕರು ಸಂಘದ ಆವರಣದಲ್ಲಿ ಅಭಿನಂದಿಸಿದರು.
ನೂತನ ಅಧ್ಯಕ್ಷ ಆರ್.ಕುಮಾರ್ ಮಾತನಾಡಿ, ಹಾಲು ಉತ್ಪಾದಕರ ಶ್ರಮದಿಂದ ಸಂಘ ಉತ್ತಮ ಪ್ರಗತಿಯಲ್ಲಿದೆ. ಪ್ರತೀ ವರ್ಷ ರೈತರಿಗೆ ಒಕ್ಕೂಟದಿಂದ ದೊರೆಯುವ ಸವಲತ್ತುಗಳನ್ನು ರೈತರಿಗೆ ತಲುಪಿಸಲಾಗುತ್ತಿದೆ. ಇತ್ತೀಚೆಗೆ ಸಂಘ ಬಿಎಂಸಿ ಕೇಂದ್ರ ಹೊಂದಿದ್ದು, ಮುಂದಿನ ದಿನಗಳಲ್ಲಿ ಸಂಘ ಆಡಳಿತ ಮಂಡಳಿ ಸದಸ್ಯರ ಉತ್ತಮ ಸಹಕಾರ ಪಡೆದು ಮತ್ತಷ್ಟು ಅಭಿವೃದ್ಧಿ ಕಾಣುತ್ತದೆ ಇದರಿಂದ ಹಾಲು ಉತ್ಪಾದಕರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಗ್ರಾಪಂ ಸದಸ್ಯ ಎಂ. ಭಾಸ್ಕರ್, ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ನಾಗೇಶ್, ಡೇರಿ ಮುಖ್ಯಕಾರ್ಯನಿರ್ವಾಹಕ ಅರ್ಕೇಶ್, ಸಂಘದ ಉಪಾಧ್ಯಕ್ಷೆ ಚಂದ್ರಮ್ಮ, ನಿರ್ದೇಶಕರಾದ ಪಿ.ವಾಸುದೇವ್, ಎಂ.ಮುತ್ತಯ್ಯ, ಎಂ.ಅಶೋಕ, ಉಮಾ, ಸಿ.ಎಂ.ಪ್ರಕಾಶ್, ಸಿ.ರಾಜು, ಶಿವಮಲ್ಲಯ್ಯ, ಜಿ.ಶ್ರೀಕಾಂತ, ಶಿವಣ್ಣ, ಕೆಂಪಮ್ಮ, ಮುಖಂಡರಾದ ರೇವಣ್ಣ, ಗಿರಿಯಪ್ಪ, ಜೈಕುಮಾರ್, ಬಸವರಾಜು, ಮಧುಸೂಧನ್, ಸಿದ್ದರಾಜು, ಹಾಲು ಪರೀಕ್ಷಕ ಸಿ.ಪಿ. ಕುಮಾರ್, ಸಿಬ್ಬಂದಿ ಲಕ್ಷ್ಮಣ, ಶಿವಕುಮಾರ್ ಇದ್ದರು.