ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ಕೊಡುಗೆ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ಕೊಡುಗೆ
Published on

ಸಾಲಿಗ್ರಾಮ: ಆಸ್ತಿ-ಅಂತಸ್ತು ಮಾಡುವುದಕ್ಕಿಂತ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದರೆ ಸಾಕು. ಅದೇ ಸಮಾಜಕ್ಕೆ ನೀವು ನೀಡುವ ಕೊಡುಗೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಧುಚಂದ್ರ ತಿಳಿಸಿದರು.

ಸಾಲಿಗ್ರಾಮ ಪಟ್ಟಣದ ಎಸ್‌ಎಲ್‌ಆರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಾಧನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದಷ್ಟಕ್ಕೆ ಎಲ್ಲ ಶಿಕ್ಷಣವನ್ನೂ ಶಿಕ್ಷಕರೇ ಕೊಡುತ್ತಾರೆ ಎಂದು ಭಾವಿಸಬಾರದು. ತಾವು ಕೂಡ ಶಿಕ್ಷಕರೊಂದಿಗೆ ಮಗುವಿನ ವಿದ್ಯಾಭ್ಯಾಸದ ಬಗ್ಗೆ ಶಾಲೆಗಳಿಗೆ ಭೇಟಿ ನೀಡಿ ವಿಚಾರಿಸಿದರೆ ತಮ್ಮ ಮಗುವಿನ ದಿನಚರಿ ತಿಳಿಯುತ್ತವೆ. ಆಗ ಆ ಮಗುವಿನ ವಿದ್ಯಾಭ್ಯಾಸಕ್ಕೆ ಮತ್ತಷ್ಟು ಅನುಕೂಲವಾಗುತ್ತದೆ. ಹಾಗಾಗಿ ಪಾಲಕರು ಶಿಕ್ಷಕರೊಂದಿಗೆ ನಿತ್ಯ ಒಡನಾಟ ಇಟ್ಟುಕೊಳ್ಳಬೇಕು ಎಂದರು.

ಮಕ್ಕಳ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ವರ್ಷಕ್ಕೆ 5, ಸಾವಿರದಿಂದ 5 ಲಕ್ಷ ರೂ.ವರೆಗೆ ಶಾಲಾ ಶುಲ್ಕ ಕಟ್ಟಿ ಹತ್ತಾರು ವಿಧದ ಶಿಕ್ಷಣ ಕೊಡಿಸುತ್ತಿದ್ದೀರಿ. ಆದರೆ ಆ ಮಗುವಿನ ವಿದ್ಯಾಭ್ಯಾಸ ದಿನನಿತ್ಯ ಯಾವ ಮಾರ್ಗದಲ್ಲಿ ಸಾಗುತ್ತಿದೆ ಎಂಬುದನ್ನು ಗಮನಿಸುವುದಿಲ್ಲ. ಪಾಲಕರು ಸೂಕ್ಷ್ಮವಾಗಿ ಗಮನಿಸಬೇಕು. ನೂರಾರು ಶಿಕ್ಷಣ ಸಂಸ್ಥೆಗಳಿದ್ದರೇನು ಪ್ರಯೋಜನವಿಲ್ಲ. ಯಾವ ಶಾಲೆಯಲ್ಲಿ ಮಕ್ಕಳಿಗೆ ಯಾವ ರೀತಿ ಶಿಕ್ಷಣ ಸಿಗುತ್ತಿದೆ ಎಂಬುದು ಬಹು ಮುಖ್ಯವಾದ ಅಂಶವಾಗಿದೆ. ಅದರಲ್ಲಿ ಸಾಲಿಗ್ರಾಮದ ಸಾಧನ ವಿದ್ಯಾಸಂಸ್ಥೆ ಮಕ್ಕಳನ್ನು ಸಾಧನೆಯತ್ತ ಕೊಂಡೊಯ್ಯುತ್ತಿದೆ ಎಂದರು.

ಇದೇ ವೇಳೆ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳು, ಸ್ಪರ್ಧೆಯಲ್ಲಿ ವಿಜೇತರನ್ನು ಅಭಿನಂದಿಸಲಾಯಿತು. ಇದಕ್ಕೂ ಮೊದಲು ಸೇನೆಯ ಹುತಾತ್ಮರಿಗೆ ಗೌರವ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಪುನೀತ್, ಉಪಾಧ್ಯಕ್ಷ ಅಮಿತ್, ಕಾರ್ಯದರ್ಶಿ ಆರ್. ಸೋಮಶೇಖರ್, ಖಜಾಂಚಿ ಹರೀಶ್, ಸವಿತಾ, ನಿರ್ದೇಶಕ ಭರತ್ ಜೈನ್, ಜ್ಯೋತಿ ಜಯಸೇನಾ, ನಿರ್ದೇಶಕಿ ಕೃಪಾ, ಶಿಕ್ಷಕ ಕಾಂತರಾಜ್, ಅಮರ್‌ಜಿತ್ ಜೈನ್, ಅಮಿತ್ ಕುಮಾರ್, ಆರ್.ಪಿ.ಜಗದೀಶ್, ಶಾಂತರಾಜ್, ಯಶಸ್ವಿನಿ, ಬಾಹುಬಲಿ ಜೈನ್, ಮಹೇಶ್, ಶಿಕ್ಷಕರಾದ ಹರೀಶ್, ಕುಮಾರ್, ರಂಜಿತಾ, ಲೀಲಾವತಿ, ನೈದಿಲೆ, ಅನುಷಾ, ಉಷಾ, ಯಶಸ್ವಿನಿ, ಬಾಲು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net