

ರಾಮದುರ್ಗ: ವೈದ್ಯೋ ಹರಿ ನಾರಾಯಣ ಎಂಬ ಮಾತಿನಂತೆ ಜನರು ವೈದ್ಯರನ್ನು ದೇವರಂತೆ ಕಾಣುತ್ತಾರೆ. ಹೀಗಾಗಿ ಜನರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಕಾಯಕ ಶ್ರೇಷ್ಠತೆ ಮೆರೆಯೋಣ ಎಂದು ರಾಮದುರ್ಗ ಮುಖ್ಯ ವೈದ್ಯಾಧಿಕಾರಿ ಡಾ.ನವೀನ ನಿಜಗುಲಿ ಹೇಳಿದರು.
ತಾಲೂಕಾಸ್ಪತ್ರೆಯಲ್ಲಿ ವೈದ್ಯರ ದಿನ ಆಚರಣೆಯಲ್ಲಿ ಮಾತನಾಡಿದ ಅವರು, ನೂರು ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸುಮಾರು 10 ಸಾವಿರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯ ಮತ್ತು ಗಂಭೀರ ಶಸ ಚಿಕಿತ್ಸೆ ಮಾಡಿಸಿಕೊಂಡ ರೋಗಿಗಳು ಗುಣಮುಖರಾಗಿದ್ದಾರೆ. ಉಚಿತ ಡಯಾಲಿಸಿಸ್ ಸೆಂಟರ್ ಇಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ಎಲ್ಲ ಯೋಜನೆಗಳ ಸೌಲಭ್ಯ ಲಭ್ಯವಿದೆ. ಗರ್ಭಿಣಿ, ಬಾಣಂತಿ ಮತ್ತು ಮಕ್ಕಳ ಆರೋಗ್ಯಕ್ಕೆ ಬೇಕಾದ ಸಕಲ ಸೌಕರ್ಯಗಳನ್ನು ಈ ಸರ್ಕಾರಿ ಆಸ್ಪತ್ರೆ ಹೊಂದಿರುವುದು ಈ ಭಾಗದ ಜನಕ್ಕೆ ವರದಾನವಾಗಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳು ಎಂದರೆ ಮಾರುದ್ದ ದೂರ ಓಡಿ ಹೋಗುವ ದಿನಗಳಲ್ಲಿ ನಮ್ಮ ತಾಲೂಕಾಸ್ಪತ್ರೆಗೆ ಜನರು ಹೆಚ್ಚಾಗಿ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಾಸ್ಪತೆಯಲ್ಲಿ ನುರಿತ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಸಚಿಕಿತ್ಸಕ ಡಾ.ಜಗನ್ನಾಥ ದೇಸಾಯಿ, ಚಿಕ್ಕ ಮಕ್ಕಳ ತ ಡಾ.ವರುಣ ಬೀಳಗಿ, ಎಲುಬು&ಕೀಲು ತ ಡಾ.ಎಂ.ಬಿ.ತಡಹಾಳ, ನೇತ್ರ ತ ಡಾ.ಆನಂದ ಬಾಳಿ, ದಂತ ವೈದ್ಯರಾದ ಡಾ.ನಾಗರತ್ನ ಬಿ.ಸಿ., ಸಿ ರೋಗ ಮತ್ತು ಪ್ರಸೂತಿ ತರಾದ ಡಾ.ಸೌಮ್ಯಾ ಮೆಳ್ಳಿಕೇರಿ, ಎನ್ಸಿಡಿ ವೈದ್ಯ ಡಾ.ಮಹಾಂತೇಶ ಆರಿಬೆಂಚಿ, ಆಯುಷ್ ವೈದ್ಯ ಡಾ.ರಾಜು ಚವ್ಹಾಣ ಹಾಗೂ ಸಿಬ್ಬಂದಿ ವರ್ಗದವರು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ. ಈ ಮೂಲಕ ಮಾದರಿ ತಾಲೂಕು ಆಸ್ಪತ್ರೆಯನ್ನಾಗಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ತಾಲೂಕಾಸ್ಪತ್ರೆ ವ್ಯಾಪ್ತಿಯಲ್ಲಿ ಕಟಕೋಳ, ಮುದಕವಿ, ಬಟಕುರ್ಕಿ, ಬೂದನೂರ(ಸಾಲಹಳ್ಳಿ), ಹುಲಕುಂದ, ಸುರೇಬಾನ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಹೊಸಕೋಟಿ ಇದೆ. ಈ ಆಸ್ಪತ್ರೆಗಳು ಗ್ರಾಮೀಣ ಭಾಗದಲ್ಲಿ ದಿನದ 24 ಂಟೆ ಸೇವೆ ಸಲ್ಲಿಸುತ್ತಿವೆ ಎಂದರು.ಡಾ.ನವೀನ ನಿಜಗುಲಿ, ಡಾ.ಜಗನ್ನಾಥ ದೇಸಾಯಿ, ಡಾ.ವರುಣ ಬೀಳಗಿ, ಡಾ.ಸೌಮ್ಯಾ ಮೆಳ್ಳಿಕೇರಿ ಸೇರಿದಂತೆ ಇತರರಿದ್ದರು.