

ಮುನವಳ್ಳಿ: ಗ್ರಾಮೀಣ ಭಾಗದಲ್ಲಿ ಜನರಿಗೆ ಉತ್ತಮ ಸೇವೆ ನೀಡಲು ಸುಸಜ್ಜಿತ ಕಟ್ಟಡ ಅವಶ್ಯ. ಹೀಗಾಗಿ, ನೂತನ ಸಭಾಭವನ ನಿರ್ಮಿಸಿರುವುದು ಸಂತಸವಾಗಿದೆ. ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಸರ್ಕಾರದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಉತ್ತಮ ಆಡಳಿತ ನೀಡಬೇಕು ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದರು.
ಸಮೀಪದ ಶಿಂದೋಗಿ ಗ್ರಾಮದಲ್ಲಿ ಮಂಗಳವಾರ ಗ್ರಾಪಂನ ಸಭಾಭವನ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಅಧ್ಯ ಡಿ.ಡಿ.ಟೋಪೋಜಿ ಮಾತನಾಡಿದರು.
ಗ್ರಾಪಂ ಉಪಾಧ್ಯೆ ಶಕುಂತಲಾ ಬಂಡಿವಡ್ಡರ, ತಾಪಂ ಇಒ ಆನಂದ್ ಬಡಕುಂದ್ರಿ, ರಾಮಪ್ಪ ರಕ್ಕಸಗಿ, ಆರ್.ಎ.ಪಾಟೀಲ, ಪಿಡಿಒ ರಮೇಶ ಬೆಡಸೂರ, ಗ್ರಾಪಂ ಸದಸ್ಯರಾದ ಈಶ್ವರ ಯೆಕ್ಕೇರಿ, ಬಸವರಾಜ ಮಾಯಪ್ಪನವರ, ಕಲ್ಲಪ್ಪ ಕುರುಬಗಟ್ಟಿ, ಮಲ್ಲಿಕಾರ್ಜುನ ದಸ್ತಿ, ಮುಶಪ್ಪ ಮುಶೆನ್ನವರ, ಕೀರಪ್ಪ ಮಾದರ, ಮಾಯವ್ವ ಟೋಪೋಜಿ, ನಿಂಗವ್ವ ಟೋಪೋಜಿ, ಸಿದ್ದವ್ವ ಟೋಪೂಜಿ, ಚನ್ನವ್ವ ಗೋಕಾವಿ, ಗುಡುಮಾ ಶರೆಗಾರ್, ಲ$್ಮವ್ವ ತಳವಾರ ಇತರರಿದ್ದರು.