ಜನರಿಗೆ ಉತ್ತಮ ಆಡಳಿತ ನೀಡಲಿ

1blh3 sanman news
Published on

ಬೈಲಹೊಂಗಲ: ಗ್ರಾಪಂ ಸದಸ್ಯರು ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಜತೆಗೆ ಜನರಿಗೆ ಉತ್ತಮ ಆಡಳಿತ ನೀಡಬೇಕು ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು.

ಪಟ್ಟಣದ ಅವರ ಗೃಹ ಕಚೇರಿಯಲ್ಲಿ ಭಾನುವಾರ ಹೊಸೂರು ಗ್ರಾಪಂ ನೂತನ ಅಧ್ಯೆ ದೀಪಾ ಪಾಟೀಲ ಹಾಗೂ ಉಪಾಧ್ಯ ಬಸವರಾಜ ಪೆಂಟೆದ ಅವರನ್ನು ಸನ್ಮಾನಿಸಿ ಮಾತನಾಡಿ, ಎಲ್ಲ ಚುನಾವಣೆಗಳಿಗಿಂತ ಗ್ರಾಪಂ ಪ್ರಬಲವಾಗಿವೆ. ಈ ಚುನಾವಣೆಯಲ್ಲಿ ಗೆಲ್ಲುವ ಜತೆಗೆ ಬಿಜೆಪಿ ಬೆಂಬಲಿತರು ಅಧ್ಯರಾಗಿರುವುದು ಸಂತಸವಾಗಿದೆ ಎಂದರು.

ಬಿಜೆಪಿ ಯುವ ಮುಖಂಡ ವಿಜಯ ಮೆಟಗುಡ್ಡ, ಮಂಡಲ ಅಧ್ಯ ಸುಭಾಸ ತುರಮರಿ, ಮಾಜಿ ಅಧ್ಯ ಗುರುಪಾದ ಕಳ್ಳಿ, ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಮಡಿವಾಳಪ್ಪ ಚಳಕೊಪ್ಪ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಗೌಡಪ್ಪ ಹೊಸಮನಿ, ಅಶೋಕ ಇಂಗಳಗಿ, ಗ್ರಾಪಂ ಸದಸ್ಯರಾದ ಶಿವನಾಯ್ಕ ಪಾಟೀಲ, ಮಲ್ಲಮ್ಮ ಸುತಗಟ್ಟಿ, ಮಲ್ಲವ್ವ ಬಾರಿಗಿಡದ, ಜಯಶ್ರೀ ಇಂಗಳಗಿ, ರತ್ನವ್ವ ಗಾಣಗಿ, ಮಲ್ಲಿಕಾರ್ಜುನ ಕರಡಿಗುದ್ದಿ, ಮುಶೇಪ್ಪ ಜಡಿ, ಮಡಿವಾಳಪ್ಪ ಕಮತಗಿ, ಮಲ್ಲಿಕಾರ್ಜುನ ವಕ್ಕುಂದ, ಸಂಜು ಪಾಟೀಲ, ಅಪ್ಪು ಇಳಿಗೇರ, ಮಂಜು ಕಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net