ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ಆರೋಗ್ಯ ನೀಡಿ : ಭಂವರ ಸಿಂಗ್ ಮೀನಾ ಸೂಚನೆ

1703KLB015
Published on

ಕಲಬುರಗಿ : ಅಂಗನವಾಡಿ ಶಾಲೆಯ ಮಕ್ಕಳಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವುಗಳನ್ನು ಸಂರಕ್ಷಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಹೇಳಿದರು.

ಸೋಮವಾರದಂದು ಹೊಸ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ೨೦೨೪-೨೫ನೇ ಸಾಲಿನ ರಾಷ್ಟೀಯ ಆರೋಗ್ಯ ಅಭಿಯಾನದ ರಾಷ್ಟೀಯ ಬಾಲ ಸ್ವಾಸ್ಥ್ಯ ಕುರಿತು ಜಿಲ್ಲಾ ಸಮನ್ವಯ ಸಮಿತಿಯನ್ನು ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿ ಶಾಲೆಗಳ ಮಕ್ಕಳನ್ನು ಗುರುತಿಸಿ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಪೌಷ್ಟಿಕ ಮಕ್ಕಳನ್ನು ಪತ್ತೆ ಹಚ್ಚಬೇಕು ಅವರೆಲ್ಲರನ್ನು ಒಂದುಗೂಡಿಸಿ ಚಿಕಿತ್ಸೆ ನೀಡಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸ್ಕೂಲ್ ಕಾಲೇಜಿನ ಆರ್.ಬಿ.ಎಸ್.ವೈ. ವೈದ್ಯರು ಭೇಟಿ ಇಲಾಖೆ ತಂಡದವರ ಆರೋಗ್ಯ ತಪಾಸಣೆ ಕಂಡುಬAದಲ್ಲಿ ಅಂಥವರಿಗೆ ಎಲ್ಲ ಚಿಕ್ಸಿತೆ ನೀಡಬೇಕು ಎಂದರು.

ಜಿಲ್ಲೆ ಎಲ್ಲ ಅಂಗನವಾಡಿ, ಸರಕಾರಿ ಅರೆಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಹುಟ್ಟಿನಿಂದ ೧೮ ವರ್ಷದವರೆಗಿನ ಎಲ್ಲ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ಆರ್.ಸಿ.ಎಚ್. ಅಧಿಕಾರಿ ಡಾ. ಸಿದ್ದರಾಮ ಪಾಟೀಲ್ ಸಭೆಯಲ್ಲಿ ಮಾತನಾಡಿದರು.

ರಾಷ್ಟಿಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಜಿಲ್ಲಾದ್ಯಂತ ಎಲ್ಲ ಅಂಗನವಾಡಿ, ಸರಕಾರಿ ಅರೆ ಸರಕಾರಿ ಶಾಲೆಗಳಲ್ಲಿ ಭೇಟಿ ಹುಟ್ಟಿನಿಂದ ೧೮ ವರ್ಷದವರೆಗಿನ ಎಲ್ಲ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದರು.ಅದರಲ್ಲಿ ನ್ಯೂನತೆ ಕಂಡು ಬಂದಲ್ಲಿ ಮಕ್ಕಳಿಗೆ ಚಿಕಿತ್ಸೆಗಾಗೆ ಆರೋಗ್ಯ ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತದೆ

ವೈದ್ಯ ಆಸ್ಪತ್ರೆ ಬೆಂಗಳೂರ ರವರಿಂದ ೦ ರಿಂದ ೧೮ ವರ್ಷದ ಮಕ್ಕಳಿಗಾಗಿ ಆರೋಗ್ಯ ತಪಾಸಣೆ ಶಿವಿರಗಳನ್ನು ಹಮ್ಮಿಕೊಂಡು ಹೃದ್ರೋಗ, ಸೀಳು ತುಟ್ಟಿ ಸೀಳು,ನೀಳ ಅಂಗುಳ ಡೊಂಕು ಬುರುಡೆ ವಕ್ರ ಕಾಲು ಇತ್ಯಾದಿ ರೋಗಗಳ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

೨೦೨೩-೨೪ನೇ ಸಾಲಿಗೆ ಹೊಲಿಸಿದರೆ ೨೦೨೪-೨೫ ನೇ ಸಾಲಿನಲ್ಲಿ ಆರ್.ಬಿ.ಎಸ್.ಕೆ ತಂಡಗಳು ಉತ್ತಮ ಕಾರ್ಯನಿರ್ವಹಿದ್ದಾರೆಂದು ಸಿ.ಇ.ಓ. ಭಂವರ್ ಸಿಂಗ್ ಮೀನಾ ಹರ್ಷ ವ್ಯಕ್ತಪಡಿಸಿದರು.

ಅದೇ ರೀತಿಯಾಗಿ ಶಾಲಾ ಶಿಕ್ಷಣ ಇಲಾಖೆಯವರು ಮಕ್ಕಳಿಗೆ ಆರೋಗ್ಯ ತಪಾಸಣೆಗೆ ಶಿಬಿರಗಳನ್ನು ಭಾಗವಹಿಸಿ ಮಕ್ಕಳು ತಮ್ಮ ಸಮಸ್ಯೆಗಳಿಂದ ಬಳಲುತ್ತಿದ್ದಾರ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ ಶಾಲಾ ಶಿಕ್ಷಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿ ದಿನ ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೂರ್ಯಕಾಂತ ಮದಾನೆ ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯತ್ ಸಿ.ಇ..ಓ. ಮಾತನಾಡಿ, ತಾಲೂಕು ವೈದ್ಯಾಧಿಕಾರಿಗಳು, ಸಿ.ಡಿ.ಪಿ.ಓ.ಗಳು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿಕೊಂಡು ಕೆಲಸಗಳನ್ನು ನಿರ್ವಹಿಸಬೇಕೆಂದರು.

ಇದೇ ಸಂದರ್ಭದಲ್ಲಿ ಡಿ.ಹೆಚ್.ಓ. ಡಾ. ಶರಣಬಸಪ್ಪ ಖ್ಯಾತನಾಳ, ಜಿಲ್ಲಾ ಸರ್ಜನ್ ಡಾ.ರೊಕ್ಕಿಯ್ಯ ಅಸನಾ ರಬ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಕುಮಾರ ರಾಠೋಡ, ಸೇರಿದಂತೆ ತಾಲೂಕು ವೈದ್ಯಾಧಿಕಾರಿ ಡಾ. ಮಾರುತಿ ಕಾಂಬಳೆ, ಕಲಬುರಗಿ ಸಿ.ಡಿ.ಪಿ.ಓ. ಭೀಮರಾಯ ಕಣ್ಣೂರ ಸೇರಿದಂತೆ ತಾಲೂಕು ವೈದ್ಯಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಎಲ್ಲಾ ತಾಲೂಕಿನ ಸಿ.ಡಿ.ಪಿ.ಓ. ಸಭೆಯಲ್ಲಿ ಭಾಗವಹಿಸಿದ್ದರು.

****

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net