ಡಿಜಿಟಲ್ ವ್ಯವಹಾರಕ್ಕೆ ಆದ್ಯತೆ ನೀಡಿ

08-DVD-3
ದೇವದರ್ಗ ಬಟ್ಟೆ ಅಂಗಡಿಗಳ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವಾಣಿಜ್ಯ ತೆರಿಗೆ ಇಲಾಖೆ ಡೆಪ್ಯೂಟಿ ಕಮಿಷನರ್ ಚಂದ್ರಶೇಖರ ಉದ್ಘಾಟಿಸಿದರು. ತಾಲೂಕು ಕಾರ್ಯದರ್ಶಿ ವಿಠ್ಠಲ್ ಹೈಯ್ಯಳ, ತಾಲೂಕು ಅಧ್ಯಕ್ಷ ಫಜಲುಲ್ಲಾ ಸಾಜೀದ್, ಉದ್ಯಮಿ ಪ್ರಕಾಶ ಖೇಣೇದ್, ಗೌರವಾಧ್ಯಕ್ಷ ಹಯ್ಯಳ ಗಂಗಾಧರ್, ಶಿವರಾಜಪ್ಪ ಇದ್ದರು.
Published on

ದೇವದುರ್ಗ: ಸ್ಪರ್ಧಾತ್ಮಕ ಯುಗದಲ್ಲಿ ವ್ಯಾಪಾರ ಮಾಡಲು ತಾಳ್ಮೆ, ನಿರಂತರ ಪರಿಶ್ರಮ ಅಗತ್ಯ ಎಂದು ವಾಣಿಜ್ಯ ತೆರಿಗೆ ಇಲಾಖೆ ಡೆಪ್ಯೂಟಿ ಕಮಿಷನರ್ ಚಂದ್ರಶೇಖರ ಹೇಳಿದರು.

ಬಟ್ಟೆ ಅಂಗಡಿಗಳ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ತಾಲೂಕು ಸಂಘದಿಂದ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು.

ವೃತ್ತಿಯಲ್ಲಿ ಪ್ರಾಮಾಣಿಕತೆ, ನಿರಂತರ ಪರಶ್ರಮ, ಗುಣಮಟ್ಟ ಕಾಪಾಡಿಕೊಂಡರೆ ಯಶಸ್ವಿ ಸಾಧಿಸಲು ಸಾಧ್ಯ. ಗ್ರಾಹಕರು ಹೊಸತನ ಬಯಸುತ್ತಿದ್ದು, ಆನ್‌ಲೈನ್ ಶಾಪಿಂಗ್ ದೊಡ್ಡ ಸವಾಲು ಒಡ್ಡಿದೆ. ಜನರ ನಾಡಿಮಿಡಿತ ಅರಿತುತೊಂಡು ಹೊಸತನಕ್ಕೆ ಒಗ್ಗಿಕೊಂಡು ವ್ಯಾಪಾರ ಮಾಡಬೇಕಿದೆ. ಪ್ರತಿಯೊಬ್ಬ ವ್ಯಾಪಾರಿ ಡಿಜಿಟಲ್ ವ್ಯವಹಾರಕ್ಕೆ ಆದ್ಯತೆ ನೀಡಬೇಕು.

ಇದರಿಂದ ಗ್ರಾಹಕರಿಗೆ ಅನುಕೂಲವಾಗುವ ಜತೆಗೆ ವಂಚನೆ ತಡೆಯಬಹುದು. ವ್ಯಾಪಾರಿಗಳು ಸಂಘ ಮಾಡಿಕೊಂಡು ಒಬ್ಬರಿಗೊಬ್ಬರು ಸಹಾಯಹಸ್ತ ಚಾಚಬೇಕು. ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾಭಿಮಾನಿ ಜೀವನ ನಡೆಸಬೇಕು ಎಂದರು.

ಸಂಘದ ತಾಲೂಕು ಕಾರ್ಯದರ್ಶಿ ವಿಠ್ಠಲ್ ಹೈಯ್ಯಳ ಮಾತನಾಡಿದರು. ಸಂಘದ ತಾಲೂಕು ಅಧ್ಯಕ್ಷ ಫಜಲುಲ್ಲಾ ಸಾಜೀದ್, ಉದ್ಯಮಿ ಪ್ರಕಾಶ ಖೇಣೇದ್, ಗೌರವಾಧ್ಯಕ್ಷ ಹಯ್ಯಳ ಗಂಗಾಧರ್ ಪ್ರಮುಖರಾದ ಶಿವರಾಜಪ್ಪ ಚಿಕ್ಕಬೂದೂರು, ಸತ್ಯನಾರಾಯಣ ಹಂಚಾಟೆ, ದೇವದುರ್ಗ ಸೈನಿಕ ತರಬೇತಿ ಅಕಾಡೆಮಿ ಸಂಚಾಲಕ ಪಂಪಣ್ಣ ಅಕ್ಕರಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net