ಯುವತಿಯರ ಹಾಸ್ಟೆಲ್ ಮುಂದೆ ಬಟ್ಟೆ ಕಳಚಿ ನಿಲ್ಲುತ್ತಿರುವ ಕಿಡಿಗೇಡಿಗಳು! ಅಶ್ಲೀಲ ವರ್ತನೆಗೆ ಬೇಕಿದೆ ಅಂತ್ಯ

WhatsApp Image 2024-04-24 at 5.44.57 PM
Published on

ಹಾವೇರಿ: ಮಹಿಳೆಯರು ಮತ್ತು ಯುವತಿಯರ ಹಾಸ್ಟೆಲ್​ಗಳ ಮುಂದೆ ಯುವಕರ ಅಶ್ಲೀಲ ವರ್ತನೆ ಕಂಡುಬಂದಿದ್ದು, ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಇಂತಹ ಅಸಭ್ಯ ದೃಶ್ಯಗಳು ಸೆರೆಯಾಗಿವೆ. ಈ ಬಗ್ಗೆ ಅಲ್ಲಿನ ಯುವತಿಯರು ದೂರು ನೀಡಿದ್ದು, ಘಟನೆ ಕುರಿತು ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

ಹಾಸ್ಟೆಲ್ ಮುಂದೆ ಬೈಕ್​ನಲ್ಲಿ ಬರುವ ಕಿಡಿಗೇಡಿಗಳು, ತಮ್ಮ ಬಟ್ಟೆ ಕಳಚಿ ನಿಲ್ಲುತ್ತಿರುವ ದೃಶ್ಯಕ್ಕೆ ಸ್ಥಳೀಯರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಕಮಲ ನಗರ ಹಾಗೂ ಈಶ್ವರ ನಗರದ ಹಾಸ್ಟೆಲ್ ಬಳಿ ಇಂತಹ ಅಸಭ್ಯ ವರ್ತನೆಗಳು ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರ ನಗರದಲ್ಲಿರುವ ಎರಡು ಗರ್ಲ್ಸ್ ಹಾಸ್ಟೆಲ್​ಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ.

ಹಾಸ್ಟೆಲ್​ನಲ್ಲಿನ ಹುಡುಗಿಯರಿಗೆ ಲೈಂಗಿಕ ಕ್ರಿಯೆಗೆ ಪ್ರಚೋದನೆ ಮಾಡುತ್ತಿರುವ ಯುವಕರು, ಹಾಸ್ಟೆಲ್ ಗೇಟ್ ಮುಂಭಾಗ ಬಂದು ಅಶ್ಲೀಲವಾಗಿ ನಡೆದುಕೊಳ್ಳುವ ದೃಶ್ಯಗಳು ಸೆರೆಯಾಗಿವೆ. ಅಶ್ಲೀಲ ಯುವಕರ ವರ್ತನೆಗೆ ಬೇಸತ್ತ ವಿದ್ಯಾರ್ಥಿನಿಯರು, ಸೈಕೋಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೋಲಿಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ನಗರ ಠಾಣೆಯ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದು, ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net