ಬೆಂಗಳೂರಿನಲ್ಲಿ ನಡೆಯುತ್ತಿದೆ GirlFriend ಎಕ್ಸ್​ಚೇಂಜ್​ ದಂಧೆ; ಮೋಜು ಮಸ್ತಿ ಮಾಡ್ತಿದ್ದವರು ಅರೆಸ್ಟ್​

GF Swapping
Published on

ಬೆಂಗಳೂರು: ವಾರಾಂತ್ಯದ ಪಾರ್ಟಿಗಳಿಗೆ ತಮ್ಮ ಸ್ನೇಹಿತೆಯರನ್ನು (GirlFriend) ಕರೆದೊಯ್ದು ಅವರನ್ನು ಬದಲಾಯಿಸಿಕೊಂಡು ಮೋಜು ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅತ್ತಿಬೆಲೆಯ ಹೇಮಂತ್ ಹಾಗೂ ಹರೀಶ್ ಬಂಧಿತರು. ಇತ್ತೀಚಿಗೆ ಈ ಲೈಂಗಿಕ ದೌರ್ಜನ್ಯದ ಬಗ್ಗೆ ಆರೋಪಿಗಳ ಸ್ನೇಹಿತೆ (GirlFriend) ನೀಡಿದ್ದ ದೂರಿನನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಒತ್ತಡಕ್ಕೆ ಮಣಿದು ಸಹಕರಿಸಿದ್ದಳು

ಕೆಲ ದಿನಗಳ ಹಿಂದೆ ಹರೀಶ್‌ಗೆ ಯುವತಿಯೊಬ್ಬಳು ಪರಿಚಯವಾಗಿದ್ದಳು. ಕ್ರಮೇಣ ಪರಸ್ಪರ ಸಲುಗೆ ಬೆಳೆದಿತ್ತು. ಈ ಸ್ನೇಹದಲ್ಲಿ ಆಗಾಗ್ಗೆ ಪಾರ್ಟಿಗಳಿಗೆ ಈ ಜೋಡಿ ಹಾಜರಾಗುತ್ತಿತ್ತು. ಆ ವೇಳೆ ತನ್ನ ಸ್ನೇಹಿತ ಹೇಮಂತ್‌ಗೆ ಗೆಳೆತಿಯನ್ನು ಹರೀಶ್ ಪರಿಚಯ ಮಾಡಿಕೊಟ್ಟ. ಆ ಪಾರ್ಟಿ ಮುಗಿದ ನಂತರ ಏಕಾಂತವಾಗಿ ಗೆಳೆಯನ ಜತೆ ಕಳೆಯಲು ಸ್ನೇಹಿತೆಗೆ ಹರೀಶ್‌ ಒತ್ತಾಯಿಸಿದ್ದ. ಈ ಒತ್ತಡಕ್ಕೆ ಮಣಿದು ಆಕೆ ಸಹಕರಿಸಿದ್ದಳು ಎನ್ನಲಾಗಿದೆ.

ಬಳಿಕ ವಾಟ್ಸ್‌ ಆಪ್‌ನಲ್ಲಿ ''ಸ್ವಿಂಗರ್ಸ್'' ಎಂಬ ಗ್ರೂಪ್ ಮಾಡಿಕೊಂಡು ಹೇಮಂತ್ ಹಾಗೂ ಹರೀಶ್‌, ಸ್ನೇಹಿತೆಯರನ್ನು ಬದಲಾಯಿಸಿಕೊಂಡು ಮೋಜಿ ಮಾಡುವ ದಂಧೆ ಶುರು ಮಾಡಿದ್ದರು. ಇದಕ್ಕಾಗಿ ನಗರದ ಹೊರ ವಲಯದಲ್ಲಿ ನಡೆಯುವ ಪಾರ್ಟಿಗಳಿಗೆ ಜೋಡಿ ಹಕ್ಕಿಗಳಂತೆ ಹೋಗಿ ಬಳಿಕ ಪರಸ್ಪರ ಗೆಳೆತಿಯನ್ನು ಬದಲಾಯಿಸಿಕೊಳ್ಳುತ್ತಿದ್ದರು. ಇತ್ತೀಚಿಗೆ ತನ್ನ ಸ್ನೇಹಿತನ ಜತೆ ಏಕಾಂತಕ್ಕೆ ಗೆಳೆತಿಯನ್ನು ಹರೀಶ್ ಒತ್ತಾಯಿಸಿದ್ದ. ಆದರೆ ಇದಕ್ಕೆ ಆಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು. ಆಗ ಖಾಸಗಿ ವಿಡಿಯೋ ಹಾಗೂ ಪೋಟೋ ಮುಂದಿಟ್ಟು ಆರೋಪಿ ಬೆದರಿಸಿದ್ದಾನೆ. ಈ ಕಿರುಕುಳ ಸಹಿಸಲಾರದೆ ಕೊನೆಗೆ ಆಕೆಗೆ ಪೊಲೀಸರಿಗೆ ದೂರು ಕೊಟ್ಟಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈನಲ್ಲಿ‌‌ ವಿಡಿಯೋ ಸೆರೆ

ಗೆಳೆತಿಯರನ್ನು ಬದಲಾಯಿಸಿಕೊಂಡ ಬಳಿಕ ಏಕಾಂತ ಕ್ಷಣಗಳನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ಆರೋಪಿಗಳು ಚಿತ್ರೀಕರಿಸಿಕೊಳ್ಳುತ್ತಿದ್ದರು. ಹೀಗಾಗಿ ಆರೋಪಿಗಳ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳು ಹಾಗೂ ಪೋಟೋಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net