ಸಹಾಯ ಕೇಳಿದ ನಶೆಯಲ್ಲಿದ್ದ ಯುವತಿಗೆ ಕ್ಯಾಬ್​​ ಚಾಲಕ ಹೀಗಾ ಮಾಡೋದು!

cab pic
Published on

ಬೆಂಗಳೂರು: ಯುವತಿ ಜತೆಗೆ ಅಸಭ್ಯ ವರ್ತನೆ ತೋರಿದ ಆರೋಪದಡಿ ಕ್ಯಾಬ್ ಚಾಲಕನನ್ನು ಜೀವನ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ‌.

ಮಾರ್ಚ್ 9ರ ಮಧ್ಯರಾತ್ರಿ 1ರಿಂದ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ‌. ಕಾಕೋಳು ಮೂಲದ ಮಂಜುನಾಥ್ ಬಂಧಿತ ಆರೋಪಿ. ನಿನ್ನೆ ರಾತ್ರಿ ಯುವತಿ ಹಾಗೂ ಆಕೆಯ ಗೆಳೆಯರಿಬ್ಬರು ಪಾರ್ಟಿ ಮುಗಿಸಿ ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಾರೆ. ಕುಡಿತದ ಅಮಲಿನಲ್ಲಿದ್ದ ಯುವತಿ ಕ್ಯಾಬ್​​ನಿಂದ ಇಳಿಯುವಾಗ ಚಾಲಕನ ಸಹಾಯ ಕೇಳಿದ್ದಾಳಂತೆ. ಈ ವೇಳೆ ಆಕೆಯ ಖಾಸಗಿ ಅಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ನೀಡಿದ ದೂರಿನ ಮೇರೆಗೆ ಬುಧವಾರ ರಾತ್ರೋರಾತ್ರಿ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net