

ಕಡಬ: ಕುಂತೂರು ಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಗಿರಿಯಪ್ಪ ಗೌಡ ಕುಂಡಡ್ಕ, ಉಪಾಧ್ಯಕ್ಷರಾಗಿ ರಮ್ಯಾ ಕೇಶವ ಗೌಡ ಕಂಡತ್ತಡ್ಕ ಆಯ್ಕೆಯಾದರು. ಇತ್ತೀಚೆಗೆ ಶಾಲೆಯಲ್ಲಿ ಪಾಲಕರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನಾಮನಿರ್ದೇಶಿತ ಸದಸ್ಯರಾಗಿ ಆರೋಗ್ಯ ಇಲಾಖೆಯ ಮೋಹನಾಂಗಿ, ಅಂಗನವಾಡಿ ಕಾರ್ಯಕರ್ತೆ ವೇದಾವತಿ, ಶಿಕ್ಷಕ ಕೇಶವ ಕೆ, ಶಾಲಾ ನಾಯಕಿ ಯಕ್ಷಿತ ಎನ್.ಟಿ, ಜನಪ್ರತಿನಿಧಿ ಕೃಷ್ಣ ವೈ, ಕಾರ್ಯದರ್ಶಿಯಾಗಿ ಶಾಲಾ ಮುಖ್ಯಶಿಕ್ಷಕಿ ಗಿರಿಜಾ ವಿ. ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಸಿದ್ದಯ್ಯ ಹಿರೇಮಠ ಮೊದಲಾದವರಿದ್ದರು. ಶಿಕ್ಷಕಿ ವಿಜಯ ಕುಮಾರಿ ಮಾರ್ಗದರ್ಶಕರಾಗಿದ್ದರು. ಶಿಕ್ಷಕ ಶಿವಣ್ಣ ಕಾರ್ಯಕ್ರಮ ನಿರೂಪಿಸಿದರು.