

ಬೆಂಗಳೂರು: ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆ ಮೇರೆಗೆ ಮೈಸೂರು ಮೃಗಾಲಯದಿಂದ 'ಶಿವಾನಿ' ಹೆಸರಿನ ಹೆಣ್ಣು ಜಿರಾಫೆಯನ್ನು ಮಂಗಳವಾರ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆತರಲಾಗಿದೆ.
ಒತ್ತಡಮುಕ್ತ ಹಾಗೂ ಸುಲಲಿತ ಸಾಗಾಣಿಕೆಗೆ ಅನುವಾಗುವಂತೆ 'ಶಿವಾನಿ'ಗೆ ಕಳೆದ ಕೆಲವು ವಾರಗಳಿಂದ ತರಬೇತಿ ನೀಡಲಾಗಿತ್ತು. 1.7 ವರ್ಷ ವಯಸ್ಸಿನ 'ಶಿವಾನಿ' 13.5 ಅಡಿ ಎತ್ತರ ಇದೆ. ಜಿರಾಫೆಯು 2022 ಜು.27 ರಂದು ಭರತ ಮತ್ತು ಬಬ್ಲಿ ಜಿರಾಫೆ ಜನಿಸಿದೆ.
ಬನ್ನೇರುಘಟ್ಟ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್, ಮೈಸೂರು ಮೃಗಾಲಯದ ಸಹಾಯಕ ನಿರ್ದೇಶಕ ಡಾ.ಜ್.ಎಲ್. ಶೀನಿವಾಸ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಪಶುಸಂಗೋಪನಾ ಸಲಹೆಗಾರ ಡಾ.ಕೆ.ವಿ.ಮದನ್, ಪಶುವೈದ್ಯಾಧಿಕಾರಿ ಡಾ.ಎಂ.ಎಸ್.ರೋಷನ್ ಕೃಷ್ಣ, ವಲಯ ಅರಣ್ಯಾಧಿಕಾರಿಗಳಾದ ಡಾ.ವಿ.ಮುನಿರಾಜು, ದಿನೇಶ್ ಅವರನ್ನು ಒಳಗೊಂಡ ತಂಡ ಜಿರಾಫೆಯನ್ನು ಮೈಸೂರಿನಿಂದ ಕರೆತಂದಿದೆ.