ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿನ ಹಸುಗೂಸು ಕಳ್ಳತನ

child sacrifice
Published on

ಕಲಬುರಗಿ: ನಗರದ ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ (ಜಿಮ್ಸ್) ಆಸ್ಪತ್ರೆಯಲ್ಲಿ ಒಂದು ದಿನದ ಹಸುಗೂಸನ್ನು ಆಸ್ಪತ್ರೆ ಸಿಬ್ಬಂದಿ ಎಂದು ಹೇಳಿಕೊಂಡು ಅಪರಿಚಿತ ಮಹಿಳೆಯರಿಬ್ಬರೂ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಒಂದು ದಿನದ ಹಿಂದೆ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಕಸ್ತೂರಿ ಸಾಗರ ಅವರಿಗೆ ಜನಿಸಿದ ಕೂಸನ್ನು ಸೋಮವಾರ ಮಧ್ಯಾಹ್ನ ಸುಮಾರು ೩ಗಂಟೆ ವೇಳೆಗೆ ನರ್ಸ್ ವೇಷದಲ್ಲಿ ಬಂದ ಕಳ್ಳಿಯರಿಬ್ಬರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ನಿನ್ನೆ ಕೂಸಿನ ಜನನವಾಗಿದ್ದು, ಜಿಮ್ಸ್ನ ಹಳೇ ಆಸ್ಪತ್ರೆಯ ಕಟ್ಟಡದಲ್ಲಿರುವ ಮಕ್ಕಳ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯ ಜತೆ ಕೂಸು ಇತ್ತು. ಸೋಮವಾರ ಮಧ್ಯಾಹ್ನ ನರ್ಸ್ಗಳಂತೆ ಎಫ್ರಾನ್ ಧರಿಸಿ, ಆಗಮಿಸಿದ ಕಳ್ಳಿಯರು ಮಗುವಿನ ರಕ್ತ ತಪಾಸಣೆ ಮಾಡಿಸಿಕೊಂಡು ಬರುತ್ತೇವೆ ಎಂದು ಕೂಸನ್ನು ಎತ್ತಿಕೊಂಡು ಹೋಗಿದ್ದಾರೆ. ಈ ಕುರಿತು ಕೂಸಿನ ತಂದೆ ರಾಮಕೃಷ್ಣ ಸಾಗರ ಬ್ರಹ್ಮಪುರ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net