ಗಿಲ್ಕಿಂಜತ್ತಾಯ ದೈವಸ್ಥಾನ ಜಾತ್ರೆ

New Project (1)
Published on

ಬಂಟ್ವಾಳ: ವೀರಕಂಭ ಗ್ರಾಮದ ಶ್ರೀ ಗಿಲ್ಕಿಂಜತ್ತಾಯ ದೈವಸ್ಥಾನ ವೀರಕಂಭದ ವರ್ಷಾವಧಿ ಜಾತ್ರೆ ಮಂಗಳವಾರ ಮತ್ತು ಬುಧವಾರ ನಡೆಯಿತು.

ಗಿಲ್ಕಿಂಜತ್ತಾಯ ಉತ್ಸವ ಸಮಿತಿ ವತಿಯಿಂದ ನಿರ್ಮಿಸಲ್ಪಟ್ಟ ಶ್ರೀ ಗಿಲ್ಕಿಂಜತ್ತಾಯ ಮಹಾದ್ವಾರವನ್ನು ದೇವಸ್ಥಾನ ಪ್ರಧಾನ ಅರ್ಚಕರು ಲೋಕಾರ್ಪಣೆ ಮಾಡಿದರು. ನಂತರ ದೈವದ ಭಂಡಾರವೇರಿ ಕಂಬಳ ವಲಸರಿ ಜರುಗಿತು. ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ ಪ್ರದರ್ಶನಗೊಂಡಿತು. ದೈವದ ಪಾರಿಚಾರಕರಾದ ಚಿಕ್ಕು ಪೂಜಾರಿ ಮೈರಾ, ಪೂವಪ್ಪ ಮಡಿವಾಳ, ದೈವ ನರ್ತಕ ಶೇಖರ ಪಂಬದ, ಬಾಲಪ್ರತಿಭೆ ಸ್ವರ ಸುಳ್ಯ, ಭರತನಾಟ್ಯ ಶಿಕ್ಷಕಿ ಚೈತ್ರಾ ಮಂಗಳೂರು, ಕಿಶೋರ್ ಡಿ.ಶೆಟ್ಟಿ ಅವರನ್ನು ಗೌರವಿಸಲಾಯಿತು. ಮಂಗಳವಾರ ಬೆಳಗ್ಗೆ ದೈವಕ್ಕೆ ಬೆಳ್ಳಿ ಕವಚದ ಮೊಗ ಒಪ್ಪಿಸಲಾಯಿತು. ನಂತರ ಹರಕೆ ನೇಮ ಜರುಗಿತು. ಸಂಜೆ ಕಲ್ಲುರ್ಟಿ, ಕಲ್ಕುಡ, ಕೊರತಿ, ಕೊರಗಜ್ಜ ದೈವದ ನೇಮ, ಬಳಿಕ ದೈವದ ಕುಕ್ಕಿಕಟ್ಟೆ ವಲಸರಿ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net