ಜಿಲ್ಲೆಯಲ್ಲಿ ನೂತನ ವರ್ಷಾಚರಣೆ ಅದ್ದೂರಿ ಸ್ವಾಗತ

66
Published on

ರಾಮನಗರ: ನೂತನ ವರ್ಷ 2025 ಅನ್ನು ಜಿಲ್ಲೆಯ ಜನತೆ ಅದ್ದೂರಿಯಾಗಿಯೇ ಸ್ವಾಗತ ಕೋರಿದ್ದಾರೆ. ಹೊಸ ವರ್ಷವನ್ನು ವಯಸ್ಸಿನ ಅಂತರವಿಲ್ಲದೆ, ಜನತೆ ಸ್ವಾಗತಿಸಿ ಸಂಭ್ರಮಿಸಿದರು.

ಈ ಬಾರಿ ಹೊಸ ವರ್ಷಾಚರಣೆಗೆ ಬಿಗಿ ನಿಯಮ ಇಲ್ಲದ ಕಾರಣದಿಂದಾಗಿ ಜಿಲ್ಲೆಯಾಧ್ಯಂತ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಕೆಲವರು ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆ ಪಟಾಕಿಗಳನ್ನು ಸಿಡಿಸಿ ಹೊಸ ವರ್ಷವನ್ನು ಸ್ವಾಗತಿಸಿದರು.

ತುಂಬಿದ ರೆಸಾರ್ಟ್‌ಗಳು: ಜಿಲ್ಲೆಯಲ್ಲಿ ಇರುವ ಬಹುತೇಕ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳು ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿವೆ. ಬೆಂಗಳೂರು ಸೇರಿ ವಿವಿಧ ಕಡೆಗಳಿಂದ ಆಗಮಿಸಿದ್ದ ಪ್ರವಾಸಿಗರು ರೆಸಾರ್ಟ್‌ನಲ್ಲಿ ಕುಣಿದು, ಸಂತೋಷ ಅಲೆಯಲ್ಲಿ ಮಿಂದೆದ್ದು ನೂತನ ಸಂವತ್ಸರವನ್ನು ಬರ ಮಾಡಿಕೊಂಡರು. ಬಹುತೇಕ ಎಲ್ಲ ರೆಸಾರ್ಟ್‌ಗಳು ಮಂಗಳವಾರ ರಾತ್ರಿ ಭರ್ತಿ ಆಗಿದ್ದವು.

ಪ್ರವಾಸಿ ತಾಣಗಳು ಬಂದ್: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಸಂಗಮಕ್ಕೆ ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಬಂದ್ ಮಾಡಲಾಗಿತ್ತು. ಇಲ್ಲಿ ಕುಡಿದು ನೀರಿಗಿಳಿಯುವ ಸಾಧ್ಯತೆ ಹೆಚ್ಚಿದ್ದ ಕಾರಣ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ಮೊದಲೇ ಸೂಚನೆ ನೀಡಲಾಗಿತ್ತು. ಅಲ್ಲದೆ, ಪಕ್ಕದ ಮುತ್ತತ್ತಿ ಪ್ರವೇಶಕ್ಕೂ ಅಲ್ಲಿನ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ ಕಾರಣದಿಂದಾಗಿ ಮಾಹಿತಿ ಇಲ್ಲದ ಪ್ರವಾಸಿಗರು ವಾಪಾಸ್ ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.

ಪೊಲೀಸರ ಕ್ರಮ: ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿಯೂ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕುಡಿದು ಅತಿವೇಗ ಚಾಲನೆ ಮಾಡಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು - ಮೈಸೂರು ಹೆದ್ದಾರಿಯ ಬಿಡದಿ - ರಾಮನಗರ- ಚನ್ನಪಟ್ಟಣ ನಡುವಿನ ಬೈಪಾಸ್ ನಲ್ಲಿಯ ಪೊಲೀಸರು ಸಾಕಷ್ಟು ಕ್ರಮ ಕೈಗೊಂಡಿದ್ದರು. ಅಲ್ಲದೆ, ನಗರದ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜನೆ ಮಾಡುವ ಮೂಲಕ ಅವಘಡಗಳು ನಡೆಯದಂತೆ ಎಚ್ಚರಿಕೆವಹಿಸಲಾಗಿತ್ತು. ಹೊಸ ವರ್ಷಾಚರಣೆ ವೇಳೆ ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆದ ಬಗ್ಗೆ ವರದಿ ಆಗಿಲ್ಲ.

ಭಕ್ತರ ದಂಡು: ಹೊಸ ವರ್ಷಾಚರಣೆ ಹಿನ್ನೆಯಲ್ಲಿ 2025ರ ಮೊದಲ ದಿನ ಬುಧವಾರ ಎಲ್ಲ ದೇವಾಲಯಗಳಲ್ಲಿ ಭಕ್ತರು ದಂಡು ದೇವಾಲಯಗಳಿಗೆ ಔಏಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಾಮದೇವರ ಬೆಟ್ಟ, ಕೆಂಗಲ್ ಆಂಜನೇಯ, ಮಾಗಡಿ ರಂಗನಾಥ, ಕಬ್ಬಾಳಮ್ಮ ಸೇರಿ ಹಲವು ದೇವಾಲಯಗಳಿ ಭೇ ಟಿ ನೀಡಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net