ದೇಶಿ ಗೋವುಗಳ ರಕ್ಷಣೆಗೆ ಮುಂದಾಗಿ

12
Published on

ರಾಮನಗರ : ಆರೋಗ್ಯ ರಕ್ಷಣೆಗೆ ದೇಶಿ ಗೋವುಗಳ ಹಾಲು ಅಮೃತಕ್ಕೆ ಸಮಾನ ಎಂದು ಚನ್ನಪಟ್ಟಣ ವಿರಕ್ತಮಠದ ಮಠಾಧ್ಯಕ್ಷ ಶ್ರೀ ಶಿವರುದ್ರ ಸ್ವಾಮೀಜಿ ತಿಳಿಸಿದರು.

ದೇಶಿ ಗೋಮಾತೆ, ಭೂಮಿ ಹಾಗೂ ದೇಶಿ ಗೋಮಾತೆಯ ನಡುವಿನ ಸಂಬಂಧ ಇತ್ಯಾದಿ ವಿಚಾರ ಜನರಿಗೆ ತಿಳಿಸುವ ಉದ್ದೇಶದೊಂದಿಗೆ ರಾಮನಗರಕ್ಕೆ ಆಗಮಿಸಿದ್ದ ನಂದಿ ರಥಯಾತ್ರೆ ವೇಳೆ ರಾಮನಗರದ ಹಳೇ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ದೇಶಿ ಗೋವಿನ ಹಾಲು ಅಷ್ಟೇ ಅಲ್ಲದೇ ದೇಶಿ ತಳಿ ಸಾಕಣೆ ಪರಿಸರಕ್ಕೆ ವರದಾನವಾಗಿದೆ. ವಿದೇಶಿ ತಳಿಗಳ ಹಾಲು ದೇಶಿ ತಳಿ ಹಾಲಿನಂತೆ ಅಷ್ಟೋಂದು ಗುಣಮಟ್ಟವಿಲ್ಲ. ವಿದೇಶಿ ತಳಿಗಳ ಹಾಲು ಶ್ರೇಷ್ಠವಾಗಿಲ್ಲ ಎಂಬ ವಿಚಾರ ಗೊತ್ತಾಗಿದೆ. ವಿದೇಶಿ ತಳಿ ಹಾಲು ಸೇವನೆ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹಿರಿಯರ ಆರೋಗ್ಯವನ್ನು ಇಂದಿನ ಪೀಳಿಗೆಗೆ ಹೋಲಿಸಿಕೊಂಡರೆ ಇಂದಿನವರ ಆರೋಗ್ಯವೇ ಚೆನ್ನಾಗಿಲ್ಲ.

ದೇಶದ ಬೆನ್ನೆಲುಬು ರೈತ. ರೈತನ ಬೆನ್ನೆಲುಬು ಗೋವು. ಆದರೆ, ಇಂದು ಕೃಷಿ ಚಟುವಟಿಕೆಗೆ ಯಂತ್ರಗಳ ಬಳಕೆಯಾಗುತ್ತಿದೆ. ದೇಶಿ ಗೋ ತಳಿಗಳು ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೇಶಿ ಗೋ ತಳಿಗಳನ್ನು ರಕ್ಷಿಸುವ ಸಲುವಾಗಿ, ದೇಶಿ ಗೋವುಗಳ ಬಗ್ಗೆ ಅರಿವು ಮೂಡಿಸುವ ಅಭಿಯಾನ ನಡೆಯುತ್ತಿದೆ. ನಾವೆಲ್ಲ ಎಂತಹ ದುಸ್ಥಿತಿಯಲ್ಲಿದ್ದೇವೆ ಎಂಬುದು ಅರಿವಾಗುತ್ತಿದೆ.ಗೋರಕ್ಷಣೆ ಯಾವ ಉದ್ದೇಶಕ್ಕಗಿ ಮಾಡಬೇಕು ಎಂಬ ವಿಚಾರಕ್ಕೆ ಎಲ್ಲರೂ ಗಮನ ಹರಿಸಬೇಕಾಗಿದೆ. ಇದೆಲ್ಲ ಗೊತ್ತಿದ್ದರೆ ಈ ವೇದಿಕೆ ಅವಶ್ಯಕತೆ ಇರಲಿಲ್ಲ. ಇನ್ನೊಬ್ಬರನ್ನು ಆಶ್ರಯಿಸುವ ಕಾಲಕ್ಕೆ ಅವಕಾಶ ಬೇಡ ಎಂದು ಸ್ವಾಮೀಜಿ ಎಚ್ಚರಿಸಿದರು.

ನಂದಿ ರಥಯಾತ್ರೆ ರಾಮನಗರ ಸ್ವಾಗತ ಸಮಿತಿ ಅಧ್ಯಕ್ಷ ಮಹೇಶ್ ಚಂದ್ರಗೋಸೇವಾ ಗತಿವಿಧಿ ಕರ್ನಾಟಕದ ಪ್ರಮುಖರಾದ ಪ್ರಾಣೇಶ್‌ಕುಮಾರ್ ಯಾತ್ರೆಯ ಅವಶ್ಯಕತೆ, ದೇಶಿ ಗೋತಳಿ ಅಭಿವೃದ್ಧಿ ಅದರ ಉಪಯುಕ್ತತೆ ಬಗ್ಗೆ ಮಾತನಾಡಿದರು.

ಮುಖಂಡರಾದ ಬಿ.ನಾಗೇಶ್, ಬಿಜೆಪಿ ಮಂಜು, ಮಹಾಲಕ್ಷ್ಮೀಗೂಳಿಗೌಡ, ಕಾಳಯ್ಯ, ರಾಘವೇಂದ್ರ, ಪುಷ್ಪಲತಾ, ಉಮೇಶ್, ಮಂಜು ಗೂಳಿ ಕುಮಾರ್, ರುದ್ರದೇವರು, ಪ್ರಕಾಶ್, ಶಿವಾನಂದ್, ನಾಗೇಂದ್ರ ಗುಪ್ತ, ರಂಜನ್, ಕಿಶನ್, ಚಂದನ್‌ಮೊರೆ, ಚನ್ನಪ್ಪ, ಶಾಂತಪ್ಪ, ಪ್ರಶಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net