ಸಕಾಲಕ್ಕೆ ಕೃಷಿ ತಜ್ಞರ ಸಲಹೆ ಪಡೆಯಿರಿ

05 gvt 08
ವಡ್ಡರಹಟ್ಟಿ ಭಾಗದ ಭತ್ತದ ಗದ್ದೆಯಲ್ಲಿ ಪ್ರಾತ್ಯಕ್ಷಿಕೆ ಕಾರ್ಯಾಗಾರದಲ್ಲಿ ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್, ಸಹಾಯಕ ಕೃಷಿ ನಿರ್ದೇಶಕ ಡಾ.ಸಿ.ಎನ್.ಅಭಿಲಾಷಾ ಇತರರಿದ್ದರು.
Published on

ಗಂಗಾವತಿ: ಭತ್ತಕ್ಕೆ ಕಾಣಿಸಿಕೊಂಡ ದುಂಡಾಣು ಮಚ್ಚೆ ರೋಗ ನಿಯಂತ್ರಣಕ್ಕಾಗಿ ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ ವಡ್ಡರಹಟ್ಟಿ ಭಾಗದ ಭತ್ತದ ಗದ್ದೆಯಲ್ಲಿ ಪ್ರಾತ್ಯಕ್ಷಿಕೆ ಕಾರ್ಯಾಗಾರ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲೆಯ ಗಂಗಾವತಿ, ಕಾರಟಗಿ ತಾಲೂಕಿನ ಭತ್ತಕ್ಕೆ ದುಂಡಾಣು ಮಚ್ಚೆ ರೋಗ ಉಲ್ಬಣವಾಗುತ್ತಿದ್ದು, ಇಳುವರಿ ಮೇಲೆ ಪರಿಣಾಮ ಬೀರಲಿದೆ. ನಿಯಂತ್ರಣಕ್ಕಾಗಿ ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರ ಸಹಯೋಗದೊಂದಿಗೆ ಭತ್ತದ ಗದ್ದೆಗೆ ತೆರಳಿ ಪರಿಶೀಲಿಸಲಾಯಿತು. ರೋಗ ನಿರ್ವಹಣೆ ಬಗ್ಗೆ ಕೃಷಿ ಅಧಿಕಾರಿಗಳು ಸಲಹೆ ನೀಡಿದರೆ, ಕೀಟ ನಾಶಕ ಬಳಕೆ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಮಾಹಿತಿ ನೀಡಿದರು.

ಕೆವಿಕೆ ಸಸ್ಯರೋಗ ತಜ್ಞೆ ಆರ್.ಎಂ.ರೇವತಿ ಮಾತನಾಡಿ, ರೋಗದ ಲಕ್ಷಣಗಳು ಹಸಿರು ಹಳದಿ ಚುಕ್ಕೆಗಳು ಎಲೆಯ ತುದಿಯಲ್ಲಿ ಕಾಣಿಸಿಕೊಳ್ಳುತ್ತವೆ. ಚುಕ್ಕೆಗಳು ದೊಡ್ಡದಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಬೆಳಗಿನ ವೇಳೆಯಲ್ಲಿ ಎಲೆಗಳ ಮಚ್ಚೆಗಳ ಮೇಲೆ ದುಂಡಾಣುವಿನ ಅಂಟನ್ನು ಕಾಣಬಹುದು ನಂತರ ಎಲೆಗಳ ತುದಿ ಒಣಗುತ್ತವೆ,

ರೋಗವು ಮೋಡ ಕವಿದ ವಾತಾವಣ, ತುಂತುರು ಮಳೆಯಿಂದ ವಾತಾವರಣದಲ್ಲಿ ಆರ್ದ್ರತೆ ಹೆಚ್ಚಾದಂತೆ ರೋಗ ಉಲ್ಬಣಗೊಂಡು ಬೇಗನೆ ವ್ಯಾಪಿಸುತ್ತದೆ. ಸಕಾಲಕ್ಕೆ ಕೃಷಿ ತಜ್ಞರ ಸಲಹೆಯಂತೆ ಕೀಟ ನಾಶಕಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್, ಸಹಾಯಕ ಕೃಷಿ ನಿರ್ದೇಶಕಿ ಡಾ. ಸಿ.ಎನ್.ಅಭಿಲಾಷಾ, ಕೃಷಿ ಅದಿಕಾರಿ ಹರೀಶ್, ಪ್ರಗತಿಪರ ರೈತರಾದ ಮೊಹ್ಮದ್ ಷರ್ೀ, ದುರುಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net